ಬಳ್ಳಾರಿ –
ಶೌಚಗೃಹ ನಿರ್ಮಾಣ ಮಾಡಿದ ಕಾಮಗಾರಿಯ ಮುಕ್ತಾಯದ ಪ್ರಮಾಣ ಪತ್ರ ನೀಡಲು ಹಣದ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದಿದ್ದ ಬಳ್ಳಾರಿಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಜೈಲು ಸೇರಿದ್ದಾರೆ.ಹೌದು ಬಳ್ಳಾರಿ ಯ ರೇಡಿಯೋ ಪಾರ್ಕ್ ಬಳಿ ಇರುವ ಸರ್ಕಾರಿ ಪ್ರೌಢಶಾಲೆ ಯ ಮುಖ್ಯಶಿಕ್ಷಕಿ ಅಬೀದಾ ಬೇಗಂ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದರು.ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗಾಗಿ ಶೌಚಗೃಹ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವ ಕುರಿತು ದೃಢೀಕರಣ ಪತ್ರ ನೀಡಲು ಬಳ್ಳಾರಿಯ ಜಯ ನಗರ ಬಡಾವಣೆ ನಿವಾಸಿ ಗುತ್ತಿಗೆದಾರ ಮೊಹಮ್ಮದ್ ಜುಲ್ಫೀಕರ್ ಎಂಬುವವರ ಬಳಿ ಅಬೀದಾ ಬೇಗಂ 10 ಸಾವಿರ ರೂ. ಲಂಚ ಕೇಳಿದ್ದರು ಈ ಕುರಿತು ದೂರು ನೀಡಿದ ಬೆನ್ನಲ್ಲೇ ಟ್ರ್ಯಾಪ್ ಮಾಡಲಾಗಿತ್ತು ಸಮಗ್ರ ವಿಚಾರಣೆಯ ಬಳಿಕ ಈಗ ನ್ಯಾಯಾಲಯಕ್ಕೆ ಹಾಜರು ಮಾಡಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
ಈ ಕುರಿತು ಮೊಹಮ್ಮದ್ ಜುಲ್ಫೀಕರ್ ಎಸಿಬಿಗೆ ದೂರು ನೀಡಿದ್ದರು.ಬಳಿಕ ಅಬೀದಾಗೆ ಹಣ ನೀಡುವ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.ಎಸಿಬಿ ಎಸ್ಪಿ ಶ್ರೀಹರಿ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸೂರ್ಯ ನಾರಾಯಣ ರಾವ್ ಹಾಗೂ ತಂಡ ದಾಳಿ ನಡೆಸಿದ್ದರು ಆರೋಪಿ ಸ್ಥಾನದಲ್ಲಿರುವ ಮುಖ್ಯ ಶಿಕ್ಷಕಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.