ಮಂಡ್ಯ –
ಬಾಲಕಿಯೊಬ್ಬಳಿಗೆ ಬಾಲ್ಯ ವಿವಾಹ ಮಾಡಿದ ಬಳಿಕ ತಾಳಿ ಬಿಚ್ಚಿಸಿ ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಕಳುಹಿಸಿದ ಘಟನೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.ಹೌದು ಮಾರ್ಚ್ 27 ರಂದು ಮನೆಯಲ್ಲೇ ಗುಟ್ಟಾಗಿ SSLC ವಿದ್ಯಾರ್ಥಿನಿಗೆ ಕೆ.ಆರ್.ಪೇಟೆ ತಾಲೂಕಿನ ಸಂಬಂಧಿ ಯುವಕನೊಂದಿಗೆ ಮದುವೆ ನಡೆದಿದೆ. 28 ರಂದು ತಾಳಿ, ಕಾಲುಂಗುರ ಬಿಚ್ಚಿಸಿಕೊಂಡು ಪಾಲಕರು ಪರೀಕ್ಷೆ ಬರೆಯ ಲು ಕಳುಹಿಸಿದ್ದರು.ಪರೀಕ್ಷೆ ಬರೆಯಲು ಹೋದಾಗ ವಿದ್ಯಾ ರ್ಥಿನಿ ಸ್ನೇಹಿತೆ ಬಳಿ ಮದುವೆ ಬಗ್ಗೆ ಹೇಳಿಕೊಂಡಿದ್ದಳು

ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.ಇನ್ನೂ ಸದ್ಯ ಬಾಲಕಿ ಮಂಡ್ಯದ ಬಾಲ ಮಂದಿರದಲ್ಲಿದ್ದಾಳೆ.ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡ ಲಾಗಿದೆ.ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಂಡ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಮದುವೆ ನಿಶ್ಚಯವಾಗಿ ದ್ದಾಗಲೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರಂತೆ.ಬಾಲ್ಯ ವಿಹಾಹ ಮಾಡುತ್ತಿರುವ ಬಗ್ಗೆ ಕಂಪ್ಲೇಂಟ್ ಬಂದ ಹಿನ್ನೆಲೆ ಯಲ್ಲಿ ಮನೆಗೆ ಭೇಟಿ ನೀಡಿ ಅಧಿಕಾರಿಳು ವಾರ್ನಿಂಗ್ ನೀಡಿದ್ದರು.ಮಾರ್ಚ್ 18 ಮತ್ತು 25 ರಂದು ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿದ್ದರು ಆದರೆ ಅಧಿಕಾರಿಗಳ ಎಚ್ಚರಿಕೆ ಹಾಗೂ ಬುದ್ಧಿ ಮಾತಿಗೂ ಕೇರ್ ಮಾಡದೇ 27 ರಂದು ಕದ್ದು ವಿವಾಹ ಮಾಡಿದ್ದಾರೆ.
ಮಂಜುನಾಥ ಸರ್ವಿ ಜೊತೆ ಪರಶುರಾಮ ಗೌಡರ ಸುದ್ದಿ ಸಂತೆ ನ್ಯೂಸ್ ಡೆಸ್ಕ್