ಮಂಗಳೂರು –
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ ತವರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇವರನ್ನು ಜಿಲ್ಲಾಡಳಿತ ಸೇರಿದಂತೆ ಹಲವರು ಬರಮಾಡಿಕೊಂಡರು.ಅಲ್ಲಿಂದ ನೇರವಾಗಿ ಕರೆದುಕೊಂಡು ಹೋಗಿ ಸನ್ಮಾನಿಸಿ ಗೌರವಿಸಲಾಯಿತು.ಇದೇ ವೇಳೆ ಮಾತನಾಡಿದ ಅವರು ನನಗಾಗಿ ಏನನ್ನೂ ಬಯಸುವು ದಿಲ್ಲ.ನನ್ನೂರಿಗೆ ಒಂದು ಪದವಿಪೂರ್ವ ಕಾಲೇಜನ್ನು ನೀಡಿ ಮತ್ತು ಅದಕ್ಕಾಗಿ ಒಂದು ಕೋಟಿ ರೂ. ಅನುದಾನ ಒದಗಿಸಿ ಎಂಬುದೇ ನನ್ನ ವಿನಮ್ರ ಪ್ರಾರ್ಥನೆ.ಇದು ಪದ್ಮಶ್ರೀ ಹಾಜಬ್ಬ ಅವರ ಭಾವುಕ ನುಡಿಗಳು.ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ದೇಶದ ಅತ್ಯುನ್ನತ ನಾಲ್ಕನೇ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸ್ವೀಕರಿಸಿ ಮಂಗಳೂ ರಿಗೆ ಮರಳಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮ್ಮಾನಿಸಲಾಯಿತು.
ನನಗಾಗಿ ಏನೇನು ಬೇಡ ನನ್ನೂರಿಗಾಗಿ ಪದವಿ ಪೂರ್ವ ಕಾಲೇಜು ಕೊಡಿ ಎಂದು ಹರೇಕಳ ಹಾಜಬ್ಬ ಹೇಳಿದರು. ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಮತ್ತೊಂದು ಪ್ರಮುಖವಾದ ಬೇಡಿಕೆಯನ್ನು ಇಟ್ಟಿದ್ದಾರೆ ಅಕ್ಷರ ಸಂತ. ಕಿತ್ತಳೆ ಹಣ್ಣು ಮಾರಿದ ವ್ಯಕ್ತಿಗೆ ಇಂತಹ ಅತ್ಯುನ್ನತ ಪ್ರಶಸ್ತಿ ಪಡೆಯಲು ಅವಕಾಶ ಮಾಡಿದ ಎಲ್ಲರಿಗೂ ನಾನು ಶಿರಬಾಗಿ ನಮಿಸುತ್ತೇನೆ. ಪ್ರಶಸ್ತಿ ಸ್ವೀಕರಿಸಲು ಹೊಸದಿಲ್ಲಿಗೆ ಹಾಗೂ ಅಲ್ಲಿಂದ ಹಿಂದಿರುಗುವರೆಗೂ ಎಲ್ಲ ರೀತಿಯ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಮಾಡಿಸಿದ್ದಾರೆ. ಸಾಮಾನ್ಯ ಬಡ ವ್ಯಕ್ತಿಯೊಬ್ಬನನ್ನು ಈ ಜಿಲ್ಲೆಯಿಂದ ರಾಷ್ಟ್ರಪತಿ ಭವನಕ್ಕೆ ಕಳುಹಿಸಲು ಸಹಕರಿಸಿದ್ದಾರೆಂದರು.
ಬರಿಗಾಲಿನ ಸಂತ ನಾನು ಹರೇಕಳದ ಮಣ್ಣಿನಲ್ಲಿ ಬರೀಗಾಲಿನಲ್ಲೇ ನಡೆದವನು.ಆದ್ದರಿಂದ ನಿನ್ನೆ ರಾಷ್ಟ್ರಪತಿ ಭವನದಲ್ಲೂ ಬರಿಗಾಲಿನಲ್ಲೇ ನಡೆದು ಪ್ರಶಸ್ತಿ ಸ್ವೀಕರಿಸಿ ದ್ದೇನೆ ಎಂದ ಹಾಜಬ್ಬ ಅವರು ಜಿಲ್ಲಾಡಳಿತ ನೀಡಿದ ಸಮ್ಮಾನವನ್ನೂ ಚಪ್ಪಲಿ ಕಳಚಿಟ್ಟು ಸ್ವೀಕರಿಸಿದರು.
ಕಸಪಾ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹಾಜಬ್ಬ ಅವರನ್ನು ಗೌರವಿಸಿದರು. ಅಪರ ಜಿಲ್ಲಾಧಿಕಾರಿ (ಪ್ರಭಾರ) ಮಾಣಿಕ್ಯ,ನಗರಾಭಿವೃದ್ಧಿ ಕೋಶದ ಉಪ ನಿರ್ದೇಶಕಿ ಗಾಯತ್ರಿ ನಾಯಕ್,ತಹಶೀಲ್ದಾರ್ ಗುರುಪ್ರಸಾ ದ್ ಉಪಸ್ಥಿತರಿದ್ದರು.