ಬೆಂಗಳೂರು –
545 ಪಿಎಸ್‌ಐ ನೇಮಕಾತಿ ಅಕ್ರಮ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಈಗಾಗಲೇ ಹಲವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.ಇನ್ನೂ ಮರು ಪರೀಕ್ಷೆ ವಿರೋಧಿಸಿ ನಡೆಸುತ್ತಿರೋ ಅನೇಕ ಅಭ್ಯರ್ಥಿಗಳ ವಿರುದ್ಧವೂ ಈಗ ಕೇಸ್ ದಾಖಲಾಗಿದ್ದರೇ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ.
ಹಾಗಾದ್ರೇ ಇದುವರೆಗೆ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರು ವಂತ ಅಭ್ಯರ್ಥಿಗಳ Rank ಲೀಸ್ಟ್ ಎಷ್ಟ ಎಂದು ನೋಡೊದಾದರೆ
ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಕಲಬುರ್ಗಿ ಹಾಗೂ ಬೆಂಗಳೂರು ಕೇಂದ್ರಗಳು ಮುಂಚೂಣಿಯಲ್ಲಿವೆ. ಈ ಕೇಂದ್ರಗಳಲ್ಲಿ ಇದುವರೆಗೆ ಆಯ್ಕೆ ಪಟ್ಟಿಯಲ್ಲಿದ್ದಂತ ಅನೇಕರನ್ನು ಸಿಐಡಿ ಬಂಧಿಸಿದೆ.ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮವೆಸಗಿ ಪಿಎಸ್‌ಐ ಹುದ್ದೆ ಗಿಟ್ಟಿಸಿಕೊಂಡಿದ್ದಂತ ಹಲವರು ಟಾಪ್ 50 Rank ಲೀಸ್ಟ್ ನಲ್ಲಿದ್ದಾರೆ ಎನ್ನುವಂತ ಸ್ಪೋಟಕ ಅಂಶ ತನಿಖೆಯಲ್ಲಿ ಬಯಲಾಗಿದೆ.
ಈ ಮಧ್ಯೆ ಮರು ಪರೀಕ್ಷೆಯನ್ನು ವಿರೋಧಿಸಿ ಪ್ರತಿಭಟ ನೆಯಲ್ಲಿ ಪಾಲ್ಗೊಂಡಿದ್ದಂತ ಮಹಿಳಾ ಕೋಟಾದಲ್ಲಿ ಮೊದಲ Rank ಪಡೆದಿದ್ದ ರಚನಾ ಕೂಡ ಆರೋಪಿ ಸ್ಥಾನದಲ್ಲಿದ್ದಾರೆ.ಅಲ್ಲದೇ ಸೇವಾನಿರತ ಕೋಟಾದಲ್ಲಿ ಹುದ್ದೆ ಪಡೆದಿದ್ದಂತ ಮೂವರು ಕಾನ್ ಸ್ಟೇಬಲ್ ಗಳು ಕೂಡ ಟಾಪ್ ಸ್ಥಾನದಲ್ಲಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಈಗಾಗಲೇ ಬೆಂಗಳೂರಿನ ಹೈಗ್ರೌಂಡ್ ಠಾಣೆಯಲ್ಲಿ ಸಿಐಡಿ ನೀಡಿದಂತ ದೂರಿನ ಆಧಾರದಲ್ಲಿ 22 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಇವರೆಲ್ಲರೂ ಓಎಂಆರ್ ಹಾಗೂ ಕಾರ್ಬನ್ ಶೀಟ್ ನಲ್ಲಿ ತಿದ್ದುಪಡಿ ಮಾಡಿರೋ ಆರೋಪ ಎದುರಿಸುತ್ತಿದ್ದಾರೆ.ಇದಲ್ಲದೇ ಪ್ರಕರಣದ ಆರೋಪಿಗಳಾದಂತ ಶಿವರಾಜ್ ಜಿ 3ನೇ Rank ಪಡೆದಿದ್ದರೇ,ಜಾಗೃತ್ ಎಸ್ 4ನೇ Rank ಪಡೆದಿ ದ್ದಾರೆ.ಇನ್ನುಳಿದವರು 7ನೇ Rankನಿಂದ 12ನೇ Rank ಪಡೆದವರೆಲ್ಲರೂ ಅಕ್ರಮದಲ್ಲಿ ಶಾಮೀಲಾಗಿರೋದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.
ಶಿವರಾಜ್ ಜಿ – 3
ಜಾಗೃತ್ ಎಸ್ – 4
ರಘುವೀರ್ ಹೆಚ್ ಯು – 7
ಯಶವಂತಗೌಡ ಹೆಚ್ – 8
ನಾರಾಯಣ ಸಿ ಎಂ – 9
ನಾಗೇಶ್ ಗೌಡ ಸಿಎಸ್ – 10
ಸಿ ಎಂ ನಾಗರಾಜ – 11
ಆರ್ ಮಧು – 12
ಸೋಮನಾಥ ಹಿರೇಮಠ – 20
ಚೇತನ್ ಕುಮಾರ್ ಎಂ ಸಿ – 21
ಕೆ ಸೂರಿನಾರಾಯಣ – 22
ಸಿ.ಕೆ ದಿಲೀಪ್ ಕುಮಾರ್ – 37
ವೆಂಕಟೇಶ್ ಗೌಡ ಬಿ ಸಿ – 42
ಮನೋಜ್ ಎ ಪಿ – 46
ಮನುಕುಮಾರ್ ಜಿ ಆರ್ – 50
ರಾಘವೇಂದ್ರ ಜಿ.ಸಿ – 62
ಸಿದ್ಧಲಿಂಗಪ್ಪ ಪಡಶಾವಗಿ – 160
ಸೇವಾ ನಿರತ ಅಭ್ಯರ್ಥಿಗಳ ಕೋಟಾದ Rank ಪಟ್ಟಿ
ಗಜೇಂದ್ರ ಬಿ – 1
ಯಶವಂತ ದೀಪ್ ಸಿ – 3
ಮಮತೇಶ್ ಗೌಡ – 27