ಉಡುಪಿ –
ಸಾರ್ ಪ್ಲೀಸ್ ಶಾಲೆ ಆರಂಭಿಸಿ ಸಾರ್ ಹೀಗೆಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಬಳಿ ಪುಟ್ಟ ಬಾಲಕಿ ಯೊಬ್ಬಳು ಬೇಡಿಕೆ ಇಟ್ಟುಕೊಂಡು ಮನವಿ ನೀಡಿದ್ದಾಳೆ
ಹೌದು ಶಿಕ್ಷಣ ಸಚಿವರಿಗೆ ಪುಟ್ಟ ವಿದ್ಯಾರ್ಥಿನಿ ಬೇಡಿಕೆ ಇಟ್ಟುಕೊಂಡು ಬರುತ್ತಿದ್ದಂತೆ ಶಿಕ್ಷಣ ಸಚಿವರು ನಗು ನಗುತ್ತಾ ಬೇಡಿಕೆ ಆಲಿಸಿದರು.ಸರಿ ಪುಟ್ಟಾ ಎನ್ನುತ್ತಾ ಯಾವಾಗ ಆರಂಭ ಮಾಡಬೇಕು ಎಂದು ಕೇಳಿದರು
ಈ ಒಂದು ಚಿತ್ರಣವು ಉಡುಪಿಯ ನಗರದ ಒಳಕಾಡು ಶಾಲೆ ಆವರಣದಲ್ಲಿ ಕಂಡು ಬಂದಿತು.ಶಾಲೆ ಪರಿಶೀಲನೆಗೆ ಬಂದಿದ್ದ ಶಿಕ್ಷಣ ಸಚಿವ ಬಿಸಿ ನಾಗೇಶ್ ಗೆ ಬಾಲಕಿ ಒತ್ತಾಯ ಮಾಡಿದಳು
ನಗರದ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿ ರುವ ಪುಟ್ಟ ಬಾಲಕಿ ಸಂಪ್ರೀತಿ ಒತ್ತಾಯವನ್ನು ಮಾಡಿದ್ದಾಳೆ ಯಾಕಮ್ಮ ನಿನಗೆ ಆನ್ ಲೈನ್ ಕ್ಲಾಸ್ ಅರ್ಥ ಆಗಲ್ವಾ ಎಂದು ಸಚಿವರು ಕೇಳುತ್ತಿದ್ದಂತೆ ಇಲ್ಲ ಸಾರ್ ಎಂದಳು ನಗು ನಗುತ್ತಾ ಪುಟ್ಟ ಬಾಲಕಿಯೊಂದಿಗೆ ಸಚಿವರು ಕೆಲ ವೊತ್ತು ಕಾಲ ಕಳೆದರು
ಅದೇ ಟೀಚರ್ ಗಳು ಅಲ್ವೇನಮ್ಮಾ ಪಾಠ ಮಾಡೋದು ಎಂದು ಸಚಿವರು ಕೇಳಿದರು.ಶಾಲೆಗೆ ಬಂದು ಪಾಠ ಕೇಳೋಕೆ ಖುಷಿಯಾಗುತ್ತೆ ಸರ್ ಎಂದು ಬಾಲಕಿ ಹೇಳಿದಳು ಇನ್ನೂ ಇದೇ ವೇಳೆ ಸಚಿವರು ಮಾತನಾಡಿ ದಸರಾ ನಂತರ ಶಾಲೆ ಆರಂಭ ಮಾಡೊದಾಗಿ ಹೇಳಿದರು
ಆಯ್ತಾ ಖಂಡಿತವಾಗಿ ಶಾಲೆ ಶುರು ಮಾಡೋಣ ಎನ್ನುತ್ತಾ ಬಾಲಕಿಗೆ ಭರವಸೆ ನೀಡಿದ ಶಿಕ್ಷಣ ಸಚಿವ ಅಲ್ಲಿಂದ ತೆರಳಿದರು