ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ನೀಡುವ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದ್ದು ಈಗಾಗಲೇ ವೇತನ ಆಯೋಗದ ಸಮಿತಿಯ ಸದಸ್ಯರು ಚಟುವಟಿಕೆಗಳನ್ನು ಆರಂಭ ಮಾಡಿದ್ದು ಇದರ ಬೆನ್ನಲ್ಲೇ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಈಗ ಸಮಸ್ತ ಸರ್ಕಾರಿ ನೌಕರರ ಪರವಾಗಿ ಹೊಸ ದೊಂದು ಬೇಡಿಕೆಗಳ ಪಟ್ಟಿಯೊಂದನ್ನು ರಾಜ್ಯ ಸರ್ಕಾರದ ಮುಂದೆ ಮತ್ತು ಸಮಿತಿಯ ಮುಂದೆ ಇಟ್ಟಿದ್ದಾರೆ.
ಹೌದು 7ನೇ ರಾಜ್ಯ ವೇತನ ಆಯೋಗದ ವೇತನ ಪರಿಷ್ಕರಣೆ ಬಗ್ಗೆ ಮಾತನಾಡಿದ ಅವರು ಮುಖ್ಯ ವಾಗಿ ಕೇಂದ್ರ ಸರಕಾರಿ ನೌಕರರ ವೇತನಕ್ಕೆ ಸಮಾನವಾಗಿ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ನೀಡಬೇಕು.ಎ,ಬಿ,ಸಿ,ಡಿ ಶ್ರೇಣಿ ನಗರಕ್ಕೆ ತಕ್ಕಂತೆ ಮನೆ ಬಾಡಿಗೆ ಭತ್ಯೆ ಹೆಚ್ಚಳ, ನಗರ ಪರಿಹಾರ ಭತ್ಯೆ ಏರಿಕೆಯಾಗಬೇಕು ಎಂಬುದು ಸಂಘದ ಒತ್ತಾಯವಾಗಿದ್ದು ಈ ಒಂದು ವಿಚಾರಗಳನ್ನು ಮುಖ್ಯಮಂತ್ರಿ ಅವರಿಗೆ ಮತ್ತು ಸಮಿತಿಯ ಅಧ್ಯಕ್ಷರ ಮತ್ತು ಸದಸ್ಯರ ಮುಂದೆ ಇಟ್ಟಿದ್ದು ಈಡೇರಿಸುವಂತೆ ಒತ್ತಾಯವನ್ನು ಮಾಡಲಾಗಿದೆ ಎಂದರು.
ಇನ್ನೂ ಇತಿಹಾಸದಲ್ಲೇ ಪ್ರಥಮ ಬಾರಿಗೆ ಐದು ವರ್ಷ ಪೂರೈಸುವು ಮುನ್ನವೇ 7ನೇ ವೇತನ ಆಯೋಗ ರಚಿಸಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು ಎನ್ನುತ್ತಾ ಈ ಒಂದು ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ವರದಿ ಸಿದ್ದತೆ ಮಾಡುವಾಗ ವೇತನ ಆಯೋಗದ ಸಮಿತಿಯವರು ಗಮನಕ್ಕೆ ತಗೆದು ಕೊಳ್ಳಲಿ ಎಂದು ಒತ್ತಾಯವನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್…..