ಬೆಂಗಳೂರು –
ಕೆಲವೊಂದಿಷ್ಟು ಬೇಡಿಕೆಗಳ ಈಡೇರಿಕೆಗೆ ಕುರಿತು ರಾಜ್ಯದ ಶಿಕ್ಷಕರು ರಾಜ್ಯ ಸರ್ಕಾರಕ್ಕೆ ಗಡುವನ್ನು ನೀಡಿದ್ದರು.ಆಗಸ್ಟ್ 31 ರ ಒಳಗಾಗಿ ರಾಜ್ಯ ಸರ್ಕಾರ ಕ್ಕೆ ಗಡುವು ನೀಡಿದ್ದು ಇದು ಇಂದು ಮುಗಿದಿದೆ. ಈಗಾಗಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಸರ್ಕಾರಕ್ಕೆ ಗಡುವು ಈ ಒಂದು ಗಡುವನ್ನಿ ನೀಡಿದ್ದರು.ಅಗಸ್ಟ್ 31 ರೊಳಗೆ C & R ತಿದ್ದುಪಡಿ ಸರಿ ಪಡಿಸಲೆಬೇಕು.C & R ತಿದ್ದುಪಡಿಗೆ ಸೂಕ್ತ ನಿರ್ಧಾರಗಳನ್ನು ಇಲಾಖೆ ಮಾಡದಿದ್ದರೆ ಸಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆ ಬಹಿಷ್ಕಾರ ಮಾಡಲಾಗು ವದು ಎಂದು ತಿಳಿಸಿದ್ದಾರೆ.
ಹೇಳಿದಂತೆ ಸಂಘಟನೆ ನಡೆದುಕೊಳ್ಳಬೇಕು ಕುಂಟು ನೆಪ ಹೇಳುವದು ಬೇಡಾ ಈಗ ಶಿಕ್ಷಣ ಸಚಿವರಿಲ್ಲಾ ಬಂದ ಮೇಲೆ ಸರ್ಕಾರದ ಮೇಲೆ ಒತ್ತಡ ಹಾಕೋಣ ಅನ್ನುವ ಹೇಳಿಕೆ ಕೊಡಬಹುದು ಅದಕ್ಕೆ ಅವಕಾಶ ಬೇಡ ತಾವು ನೀಡಿರುವ ಹೇಳಿಕೆಯಂತೆ ನಡೆದು ಕೊಳ್ಳಬೇಕು.ಅವಾಗ ಪದವಿಧರ ಶಿಕ್ಷಕರು ನಿಮ್ಮನ್ನ ನಂಬಬಹುದು.ಪದವೀಧರ ಶಿಕ್ಷಕರ ಸಂಘವು ಸಹ ಭೌತಿಕ ತರಗತಿ ಪ್ರಾರಂಭವಾದ ಮೇಲೆ 1 ರಿಂದ 5 ಕ್ಕೆ ಸೀಮಿತದ ಹೋರಾಟದ ವಿಚಾರವನ್ನು ತಮಗೆ ನೆನಪಿಸುತಿದ್ದೇವೆ ಎಂದು ಶಿಕ್ಷಕರು ಖಡಕ್ ಸಂದೇಶವನ್ನು ನೀಡಿದ್ದಾರೆ