ಬೆಂಗಳೂರು –
7ನೇ ವೇತನ ಆಯೋಗ ಜಾರಿಗೆ ಸೇರಿದಂತೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯದ ಸರ್ಕಾರಿ ನೌಕರರು 7 ದಿನಗಳ ಗಡುವನ್ನು ನೀಡಿ ಇವುಗಳನ್ನು ಈಡೇರಿ ಸದಿದ್ದರೆ ಮಾರ್ಚ್ 1 ರಿಂದ ಹೋರಾಟವನ್ನು ಮಾಡಲಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶ ವನ್ನು ರವಾನೆ ಮಾಡಿದ್ದಾರೆ.ಈ ಒಂದು ಖಡಕ್ ಸಂದೇಶದಿಂದ ಎಚ್ಚೇತ್ತುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಭಟನೆಗೆ ಹೊರಟ ಸರ್ಕಾರಿ ನೌಕರರಿಗೆ ಸಂಧಾನ ಸಂದೇಶವನ್ನು ರವಾನಿಸಿದ್ದಾರೆ.
ಹೌದು 7ನೇ ವೇತನ ಆಯೋಗದಶಿಫಾರಸುಗಳ ಜಾರಿಗೆ ತರುವ ಕುರಿತು ಬದ್ಧತೆ ಪ್ರಕಟಿಸಬೇಕು ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಹೋರಾಟ ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘವು ತೀರ್ಮಾನಿಸಿದೆ.ಇತ್ತ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಾ ಪ್ರತಿಭಟನೆಗೆ ಅವಕಾಶವಿಲ್ಲದಂತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸ ಬೇಕು ಎಂದು ವಿಧಾನಸಭೆಯಲ್ಲೇ ಹೇಳಿ ಮುಖ್ಯಮಂತ್ರಿಗೆ ಒತ್ತಾಯವನ್ನು ಕೂಡಾ ಮಾಡಿದ್ದಾರೆ.
ಇದರ ಬೆನ್ನಲ್ಲೇ ಸರ್ಕಾರಿ ನೌಕರರ ಬೇಡಿಕೆಗಳ ವಿಚಾರದಲ್ಲಿ ಸರ್ಕಾರ ಬದ್ಧತೆಯನ್ನು ಹೊಂದಿದೆ ಬಜೆಟ್‌ನಲ್ಲಿ ಕೂಡಾ ಹಣ ತೆಗೆದಿಡಲಾಗಿದೆ. ಏಳನೇ ವೇತನ ಆಯೋಗದ ವರದಿಯನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ಅವರು ಬಜೆಟ್ ದಿನವೂ ಹೇಳಿದ್ದರು. ಇದೀಗ ನೌಕರರ ಸಂಘದ ಪದಾಧಿ ಕಾರಿಗಳ ಜೊತೆ ಮಾತುಕತೆಗೂ ಅವರು ಮುಂದಾಗಿದ್ದಾರೆ.ಯಾವುದೇ ಆತುರದ ನಿರ್ಧಾರ ಬೇಡ, ಮಾತುಕತೆ ನಡೆಸೋಣ ಎಂಬ ಸಂದೇಶ ವನ್ನು ಸರ್ಕಾರಿ ನೌಕರರ ಪದಾಧಿಕಾರಿಗಳಿಗೆ ಸಿಎಂ ರವಾನಿಸಿದ್ದು ಇದಕ್ಕೆ ರಾಜ್ಯದ ಸರ್ಕಾರಿ ನೌಕರರ ಸಂಘವು ನೌಕರರು ಹೇಗೆ ಸ್ಪಂದಿ ಸುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..