ಬೆಂಗಳೂರು –
ಶಾಲೆಗಳು ಆರಂಭಗೊಂಡ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ, ವಾಟ್ಸಾಪ್ ಗ್ರೂಪ್ ರಚಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ಸರ್ಕಾರದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪಿಸಲು ಹಾಗೂ ಅದಕ್ಕೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ಮಾಡಿ ಹಳೆಯ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಿಕೊಳ್ಳಲು ತಿಳಿಸಲಾಗಿತ್ತು.
ಈಗಾಗಲೇ 25007 ಶಾಲೆಗಳು ವಿದ್ಯಾರ್ಥಿಗಳ ಸಂಘ ಸ್ಥಾಪಿಸಿಕೊಂಡಿದ್ದು, ಅವುಗಳಲ್ಲಿ 15,170 ಶಾಲೆಗಳು ವಾಟ್ಸ್ ಆಪ್ ಗ್ರೂಪನ್ನು ರಚಿಸಿಕೊಂಡಿ ರುತ್ತವೆ.
ಜಿಲ್ಲಾವಾರು ಮಾಹಿತಿಯನ್ನು ಲಗತ್ತಿಸಿದೆ. ಈಗಾ ಗಲೇ ಹಳ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿರುವ ಎಲ್ಲಾ ಶಾಲೆಗಳು ಕೂಡಲೇ ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು ಸದಸ್ಯರ ಸಂಖ್ಯೆ ಹೆಚ್ಚಿಸುವುದು ಹಾಗೂ ಇಲ್ಲಿಯವರೆಗೆ ಸಂಘ ರಚಿಸಿಕೊಳ್ಳದೇ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು 30/05/2024 ರಿಂದ ಒಂದುವಾರದೊಳಗೆ ಕಡ್ಡಾಯವಾಗಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ
ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು ಕಛೇರಿ ಯಿಂದ ನೀಡಿರುವ ಗೂಗಲ್ ಪಾರ್ಮ್‌ನಲ್ಲಿ ಮಾಹಿತಿಯನ್ನು ಭರ್ತಿ ಮಾಡುವುದು. ಎಲ್ಲಾ ಶಾಲೆಗಳು ಸಂಘ ಸ್ಥಾಪಿಸುವಂತೆ ಹಾಗೂ ವಾಟ್ಸ್ ಆಪ್ ಗ್ರೂಪ್ ರಚಿಸಿಕೊಳ್ಳುವಂತೆ ಉಪನಿರ್ದೇ ಶಕರು (ಆಡಳಿತ) ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..