ಮಂಡ್ಯ –
ಶಾಲೆ ಪ್ರಾರಂಭವಾಗುತ್ತಿದ್ದಂತೆ ಕ್ರೀಡಾ ಸಚಿವ ನಾರಾಯಣಗೌಡರು ರಾಜ್ಯದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಕಿವಿ ಮಾತೊಂದನ್ನು ಹೇಳಿದ್ದಾರೆ.ಪಾಠದ ಜೊತೆ ಜೊತೆಯಲ್ಲಿ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡುವಂತೆ ಸಚಿವರು ಹೇಳದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಓದಿನ ಜೊತೆಗೆ ಆಟವನ್ನು ಹೆಚ್ಚು ಆಡಿಸಬೇಕು ಎಂದು ಸೂಚನೆ ನೀಡಿದರು.ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವಂತೆ ಈ ಮೂಲಕ ಕ್ರೀಡಾ ಸಚಿವ ನಾರಾಯಣ್ ಗೌಡ ಹೇಳಿದ್ದಾರೆ.ಖಾಸಗಿ ಶಾಲೆಯವರಿಗೂ ಮನವಿ ಮಾಡುತ್ತೇನೆ.ಮಕ್ಕಳಿಗೆ ಪಾಠದ ಜೊತೆಯಲ್ಲಿ ಆಟವೂ ಅಗತ್ಯ ಇದೆ ಎಂದರು.
ದಿನದ ಒಂದು ಗಂಟೆ ಮಕ್ಕಳಿಗೆ ಕ್ರೀಡೆ ಅತ್ಯವಶ್ಯಕ ವಾಗಿದೆ.ಕ್ರೀಡಾಂಗಣ ಇಲ್ಲದಿದ್ದರೆ ಹೊರಗೆ ಕರೆದು ಕೊಂಡು ಹೋಗಿ ಆಟವಾಡಿಸಬೇಕು.ಇದಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ ಎಂದರು
ನಮ್ಮ ಪ್ರಧಾನಿ ಭಾರತವನ್ನ ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ಚಿಂತನೆ ನೆಡೆಸಿದ್ದಾರೆ ಎಂದರು.ಹಾಗಾಗಿ ಎಲ್ಲರೂ ಸಹ ಆಟಕ್ಕೆ ಹೆಚ್ಚಿನ ಒತ್ತು ನೀಡಿ ಪಾಲನೆ ಮಾಡಿ ಎನ್ನುತ್ತಾ ಸರ್ಕಾರ ಇದರ ಬಗ್ಗೆ ಚರ್ಚಿಸಿ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.