ಬೆಂಗಳೂರು –
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಅವಧಿ ಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ ಹೌದು ಉತ್ತೀರ್ಣ ಕಡ್ಡಾಯವನ್ನು ಮಾಡಿ ಈ ಒಂದು ಅವಧಿಯನ್ನು ವಿಸ್ತರಿಸಿದೆ ರಾಜ್ಯ ಸರ್ಕಾರ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಉತ್ತೀರ್ಣ ಕಡ್ಡಾಯದ ಆದೇಶವನ್ನು ಡಿ.31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿ ತಂತೆ ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿ ಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2012ನ್ನು ರೂಪಿಸಲಾಗಿದೆ . ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಸರ್ಕಾರ ಅಥವಾ ಅದು ಅನುಮೋದಿಸಿದ ಏಜೆನ್ಸಿಯು ನಡೆಸತಕ್ಕದ್ದೆಂದು ನಿರ್ಧಿಷ್ಟಪಡಿಸಿದ್ದು,ಪ್ರಸ್ತುತ ಸರ್ಕಾರದಿಂದ ಅನುಮೋದಿಸಲ್ಪಟ್ಟ ಕಿಯೋನಿಕ್ಸ್ ಸಂಸ್ಥೆಯ ಮೂಲಕ ನಡೆಸಲಾಗುತ್ತಿದೆ.
ಈ ನಿಯಮಗಳು ನೇರ ನೇಮಕಾತಿ ಹೊಂದಿದ ಮತ್ತು ಸೇವಾನಿರತ ಸರ್ಕಾರಿ ನೌಕರರಿಗೆ ಅನ್ವಯ ವಾಗುತ್ತದೆ ಎಂದು ತಿಳಿಸಿ.ಸಿಎಲ್ ಟಿ ಪರೀಕ್ಷೆಯ ಲ್ಲಿ ಉತ್ತೀರ್ಣರಾಗಲು ನಿಗಧಿಪಡಿಸಿದ್ದ ಕಾಲಮಿತಿ ಯನ್ನು ದಿನಾಂಕ 31-12-2023ರವರೆಗೆ ವಿಸ್ತರಿ ಸಲಾಗಿದೆ. ಸೇವಾನಿರತ ಸರ್ಕಾರಿ ನೌಕರರು ನೇರ ನೇಮಕಾತಿ ಹೊಂದಿದ ನೌಕರರು ದಿನಾಂಕ 31-12-2023ರೊಳಗೆ ಅಥವಾ ತಮ್ಮ ಪರಿವೀಕ್ಷಣಾ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರು ತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..