ಬೆಂಗಳೂರು –
ಮಾಜಿ ಸಚಿವ ಗೋಕಾಕ್ ಸಾಹುಕಾರ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಜೊತೆಯಲ್ಲಿದ್ದ ಆಕಾಶ್ ತಳವಾಡೆ ಎಂಬಾತ ಪೊಲೀಸರು ಹಾಗೂ ಮ್ಯಾಜಿ ಸ್ಟ್ರೇಟ್ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಮೂರು ನಾಲ್ಕು ತಿಂಗಳಿಂದ ಗ್ಯಾಂಗ್ ಜೊತೆ ನಡೆಸಿದ್ದ ಸಂಚು, ಯುವತಿ ಹಾಗೂ ಗ್ಯಾಂಗ್ ನಡುವಿನ ಎಲ್ಲಾ ವ್ಯವಹಾರಗಳ ಬಗ್ಗೆ ಸಿಆರ್‌ಪಿಸಿ 164 ರಡಿ ಮ್ಯಾಜಿಸ್ಟ್ರೇಟ್ ಮುಂದೆ ಆಕಾಶ್ ಮಾಹಿತಿ ಬಿಚ್ಚಿಟ್ಟಿದ್ದಾನೆ. ಈಗ ನರೇಶ್ ವಿಡಿಯೊ ಹೇಳಿಕೆಗೆ ವಿರುದ್ಧವಾಗಿ ಆಕಾಶ್ ಹೇಳಿಕೆ ನೀಡಿದ್ದಾನೆ.

ಮಾರ್ಚ್ 1ರಂದು ಆರ್.ಟಿ.ನಗರದಲ್ಲಿ ನಡೆದ ಮೀಟಿಂಗ್‌ನಲ್ಲಿ ವಿಡಿಯೊ ರಿಲೀಸ್‌ಗೆ ಸಂಚು ನಡೆದಿತ್ತು. ಮೀಟಿಂಗ್‌ನಲ್ಲಿ ಯಾರೆಲ್ಲಾ ಇದ್ದರು, ಏನೇನು ಚರ್ಚೆಗಳಾದವು ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾನೆ.ಸಿ.ಡಿ ಬಿಡುಗಡೆಗೂ ಮುನ್ನ ಯುವತಿ ಜೊತೆ ಗೋವಾದಲ್ಲಿದ್ದೆ. ವಿಡಿಯೊ ರಿಲೀಸ್ ನಂತರ ಯುವತಿಯನ್ನು ಗ್ಯಾಂಗ್ ಬೆಂಗಳೂರಿಗೆ ಕರೆದೊಯ್ದಿದೆ ಎಂದು ತಿಳಿಸಿದ್ದಾನೆ. ಎಸ್‌ಐಟಿ ಅಧಿಕಾರಿಗಳು ಆಕಾಶ್‌ನನ್ನು ಒಂದು ವಾರ ನಡೆಸಿದ ವಿಚಾರಣೆಯಲ್ಲಿ ಆತ ಈ ಗ್ಯಾಂಗ್‌ನ ಭಾಗವಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ, ಆತನನ್ನು ಎಸ್‌ಐಟಿ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.