ಧಾರವಾಡ –
ಅಕ್ಷರತಾಯಿ ಲೂಸಿ ಸಾಲ್ಡಾಲರ 105ನೇ ದತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊಪ್ಪಡ್ಲ ಗೆ ಮುಂದುವರಿದ ಅಕ್ಷರ ತಾಯಿಯ ಮಹಾನ್ ಸೇವೆ ಶಿಕ್ಷಕ ಎಲ್ ಐ ಲಕ್ಕಮ್ಮನವರ ರಿಂದ ವಿಶೇಷ ಸ್ಟೋರಿ
ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರ ವರ 105 ನೆಯ ದತ್ತಿಯನ್ನು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊಪ್ಪಡ್ಲ ಶಾಲೆಗೆ ನೀಡುವರು. ಧಾರವಾಡದ ಅಕ್ಷರತಾಯಿ ಎಂದೆ ಖ್ಯಾತರಾದ ದತ್ತಿದಾನಿ ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನರವರು, ತಮ್ಮ 105 ನೆಯ ದತ್ತಿಯನ್ನು ತನ್ನ ಪತಿಯ ಊರು ಯರಗಟ್ಟಿ ತಾಲೂಕಿನ ಸೊಪ್ಪಡ್ಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಲಿದ್ದಾರೆ
ಸೋಮವಾರ ದಿನಾಂಕ 26-2-2024 ರಂದು ಸಾಯಂಕಾಲ 5 ಗಂಟೆಗೆ ಆ ಶಾಲೆಯಲ್ಲಿ ಜರುಗ ಲಿರುವ ಸರಳ ಸಮಾರಂಭದಲ್ಲಿ ನೀಡುವರು ಎಂದು ಮುಖ್ಯ ಶಿಕ್ಷಕ ಶಿವಾನಂದ ಮಿಕಲಿ ತಿಳಿಸಿದರು.ಈ ಒಂದು ದತ್ತಿನಿಧಿ ಸ್ಥಾಪಿಸುವ ಕಾರ್ಯಕ್ರಮದಲ್ಲಿ ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮೋಹನ್ ದಂಡಿನ ಕ್ಷೇತ್ರ ಸಮನ್ವಯಾಧಿಕಾರಿ ಬಿ ಎನ್. ಬ್ಯಾಳಿ ಕ್ಷೇತ್ರ
ಶ್ರೀಮತಿ ದ್ರಾಕ್ಷಾಯಿಣಿ ಎಸ್ ಮಹಾಲ್ಮನಿ. ಅಧ್ಯಕ್ಷರು ಎಸ್ ಡಿಎಂಸಿ ಸೊಪ್ಪಡ್ಲ. ವಸಂತ ಬಡಿಗೇರ.ಸಮೂಹ ಸಂಪನ್ಮೂಲ ವ್ಯಕ್ತಿಗಳು ಯರಗಟ್ಟಿ.ಸವದತ್ತಿಯ ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ.
ಯರಗಟ್ಟಿಯ ಆಶಾ ಫರೀಟ ಅಪ್ನಾದೇಶ ಫೌಂಡೇಶನ್ ಧಾರವಾಡದ ಅಧ್ಯಕ್ಷರಾದ ವಾಯ್ ಬಿ ಕಡಕೋಳ, ಪ್ರಧಾನ ಕಾರ್ಯದರ್ಶಿ ವೀಣಾ ಟಿ, ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅಧ್ಯಕ್ಷರಾದ ವಿ ಎನ್ ಕೀರ್ತಿವತಿ ಕಾರ್ಯಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ ಕೋಶಾದ್ಯಕ್ಷರಾದ ಪ್ರಮಿಳಾ ಜಕ್ಕಣ್ಣವರ ನರೇಂದ್ರದ ಸಮಾಜಸೇವಕರು ಮಲ್ಲಪ್ಪ ಹೊಸಕೇರಿ,
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಯರಗಟ್ಟಿಯ ಆಶಾ ಫರೀಟ ಸೇರಿದಂತೆ ಸೇರಿದಂತೆ, ಅನೇಕರು , ವ್ಯಕ್ತಪಡಿಸಿ, ಅಕ್ಷರತಾಯಿ ಲೂಸಿ ಸಾಲ್ಡಾನರವರ ದತ್ತಿ ಸದುಪಯೋಗ ಆಗಲಿ, ಈ ನಿಟ್ಟಿನಲ್ಲಿ ಆ ಶಾಲೆಯ ಮುಖ್ಯ ಶಿಕ್ಷಕರಾದ ಶಿವಾನಂದ ಮಿಕಲಿ ಅವರಲ್ಲಿ ವಿನಂತಿ ಮಾಡಿದ್ದಾರೆ.
ವರದಿ ಎಲ್ ಐ ಲಕ್ಕಮ್ಮನವರ ಸುದ್ದಿ ಸಂತೆ ನ್ಯೂಸ್ ಧಾರವಾಡ……