ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಸಂತ ಹಾಜಬ್ಬ – ರಾಷ್ಟ್ರಪತಿ ಗಳಿಂದ ಪ್ರಧಾನ ಮಾಡಿ ಗೌರವ…..

Suddi Sante Desk

ನವದೆಹಲಿ –

ಅಕ್ಷರ ಸಂತ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ‌.ಹೌದು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸೋಮವಾರ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.ಅಕ್ಷರ ಸಂತ ಅಂತಾ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಹಾಜಬ್ಬ ಅವರು ಇಂದು ರಾಷ್ಟ್ರಪತಿಗಳಿಂದ ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದರು.

ಹರೇಕಳ ನಿವಾಸಿ ಹಾಜಬ್ಬ ನಿತ್ಯವೂ 25 ಕಿ.ಮೀ ದೂರದ ಮಂಗಳೂರಿಗೆ ಬಂದು ತಲೆಯ ಮೇಲೆ ಬುಟ್ಟಿಯಲ್ಲಿ ಕಿತ್ತಳೆ ಹಣ್ಣು ಮಾರುತ್ತಾ ಅದರಿಂದ ಗಳಿಸಿದ ಹಣದಲ್ಲಿ ಶಾಲೆ ಕಟ್ಟಿದ್ದಾರೆ

ಇದರೊಂದಿಗೆ ಈ ಮೂಲಕ ಇವರು ಅಕ್ಷರ ಸಂತ ಎಂದೇ ಖ್ಯಾತಿಯಾದವರು.ಅಕ್ಷರ ಕಲಿಯದ ಕಾರಣದಿಂದ ವಿದೇಶಿ ಪ್ರವಾಸಿಗರಿಗೆ ಕಿತ್ತಳೆ ಹಣ್ಣು ಮಾರಲಾಗದ ಸ್ಥಿತಿಯಿಂದ ಎಚ್ಚೆತ್ತು ಭವಿಷ್ಯದ ಪೀಳಿಗೆಗಾಗಿ ಶಾಲೆ ಆರಂಭಿಸಿದರು. ಈಗ ಅದು ಸರ್ಕಾರಿ ಶಾಲೆಯಾಗಿ ಬದಲಾಗಿರೊದನ್ನು ಇಲ್ಲಿ ನೆನೆಸಿಕೊಳ್ಳಬಹುದು

ಪ್ರಶಸ್ತಿಯ ಮಾಹಿತಿ ನೀಡಲು ಅಧಿಕಾರಿಗಳು ಕರೆ ಮಾಡಿದ ಸಮಯದಲ್ಲಿ ಹಾಜಬ್ಬ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಸಾಲಿನಲ್ಲಿ ನಿಂತಿದ್ದರು. ಇದು ಇವರ ವ್ಯಕ್ತಿತ್ವದ ಸರಳತೆಗೆ ಹಿಡಿದ ಉದಾಹರಣೆಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.