ಧಾರವಾಡ –
ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ ಹೆಸರಿನಲ್ಲಿ ಸಸಿ ನೆಟ್ಟ ಹುಬ್ಬಳ್ಳಿಯ ಪಾವರ್ ಆಫ್ ಯುಥ್ಸ ಫೌಂಡೇಶನನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಇಒ ಉಮೇಶ ಬಮ್ಮಕ್ಕನವರ ಹೌದು ಊರಿನ ಯುವಕರು, ಸಂಘ ಸಂಸ್ಥೆಗಳು ಸರಕಾರಿ ಶಾಲೆಗಳ ಪ್ರಗತಿಗಾಗಿ ಮತ್ತು ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯ ಸಹಕಾರ ನೀಡುವುದರ ಮೂಲಕ ಹೆಸರು ಮಾಡಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕ ನವರ ಸಲಹೆ ನೀಡಿದರು
ಹುಬ್ಬಳ್ಳಿಯ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಬೆಂಗೇರಿಯಲ್ಲಿ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ 109.ನೆಯ ದತ್ತಿನಿಧಿ ಸ್ಥಾಪನೆ ಮತ್ತು ನಮ್ಮುರ ಶಾಲೆ ನಮ್ಮ ಹೆಮ್ಮೆ ಅಡಿಬರಹದಲ್ಲಿ ಪವರ ಆಫ್ ಯುಥ್ಸ ಫೌಂಡೇಶನ್ (ರಿ) ವತಿಯಿಂದ ಮೊದಲನೆಯ ದತ್ತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಇದೇ ವೇಳೆ ಮಾತನಾಡಿದ ಅವರು ಹುಬ್ಬಳ್ಳಿಯ ಪವರ್ ಆಫ್ ಯುಥ್ಸ ಫೌಂಡೇಶನರವರ ಸರಕಾರಿ ಶಾಲೆಯ ಬಗೆಗಿನ ಕಳಕಳಿ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿ,ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ, ನಿವೃತ್ತ ಶಿಕ್ಷಕಿ ದತ್ತಿದಾನಿ ಲೂಸಿ ಸಾಲ್ಡಾನರವರು ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ, ತಾವಾಯಿತು,ತಮ್ಮ ಸಂಸಾರವಾಯಿತು
ಎನ್ನುವವರ ಮದ್ಯೆ ಈ ಮಹಾನ್ ತಾಯಿ ಆದರ್ಶವಾಗಿ ನಿಲ್ಲುತ್ತಾರೆ*, ನಿವೃತ್ತಿ ಆಗಿ ಹದಿನಾರು ವರ್ಷ ಕಳೆದಿ ದ್ದರೂ, ತನ್ನ *ಪಿಂಚಣಿ ಹಣವನ್ನು ಕೂಡಿಟ್ಟು,ಸರಕಾರಿ ಶಾಲೆಗಳ ಮಕ್ಕಳಿಗೆ ಕಲಿಕೆಗೆ ಆಸರೆಯಾಗಲಿ ಎಂದು ದತ್ತಿ ನೀಡುವ ಇವರ ಕಾರ್ಯ ಅತ್ಯಂತ ಶ್ರೇಷ್ಠ ಕಾರ್ಯ ವಾಗಿದೆ ಎಂದರು
ಎಲ್ ಐ ಲಕ್ಕಮ್ಮನವರು ಕಾರ್ಯಕ್ರಮದ ಪ್ರಾಸ್ಥಾವಿಕ ನುಡಿ ಹಾಗೂ ಲೂಸಿ ಸಾಲ್ಡನರವರ ಪರಿಚಯಿಸಿದರು.
ನಂತರ ದತ್ತಿ ಹಣವನ್ನು ಚೆಕ್ ಮುಖಾಂತರ ಶಾಲೆಯ ಪ್ರಧಾನ ಗುರುಮಾತೆಯಾದ ಕೆ.ಎ ಪಿಳ್ಳೈ ಹಾಗೂ SDMC ಅಧ್ಯಕ್ಷರು ಹಾಗೂ ಸದಸ್ಯರ ಹಾಗೂ ಶಾಲಾ ಅಭಿವೃದ್ಧಿ ಮಂಡಳಿ ಯವರಿಗೆ ನಿಡಲಾಯಿತು.
ಲೂಸಿ ಸಾಲ್ಡನವರ ಜೀವನ ಹಾಗೂ ಸಾಧನೆ ಬಗ್ಗೆ ರಚಿತವಾದ ಪುಸ್ತಕ ವನ್ನು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನೀವು ಸಹ ಓದಿ ಒಳ್ಳೆಯ ಕೆಲಸ ಮಾಡಿ ತಂದೆ ತಾಯಿಗೆ ಗೌರವ ತಂದು ಕೊಡಬೇಕು ಮತ್ತು ಈ ರೀತಿ ಸಮಾಜ ಸೇವೆಯನ್ನು ಮಾಡಬೇಕು ಎಂದು ಮಕ್ಕಳಿಗೆ ಹುರಿದುಂಬಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಅಥಿತಿ ಗಳಾದ *ಡಾ|| ರಮೇಶ ಮಹದೇವಪ್ಪನವರ ಸಮಾಜ ಸೇವಕರು ಹುಬ್ಬಳ್ಳಿ ಇವರು ಈ ದತ್ತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾ ಡಿದರು ಮತ್ತು ಅವರು ಸಹ ಹನ್ನೊಂದು ಸಾವಿರ ರೂಪಾಯಿ ದತ್ತಿಯನ್ನು ಘೋಷಿಸಿದರು
ಅದೇ ರೀತಿ ಕಲ್ಲಪ್ಪ ಹೊಸಮನಿ, ರವಿ ಮಳಗಿ ಮತ್ತು ಅಶೋಕ ವಾಲ್ಮೀಕಿ ರವರು ಸಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಇನ್ನು ರವಿಚಂದ್ರನ್ ದೊಡ್ಡಿಹಾಳ ಅಧ್ಯಕ್ಷರು ಹಾಗೂ ಸದಸ್ಯರು ಸಹ ಶಾಲೆಯ ದತ್ತಿನಿಧಿ ಯಾಗಿ ಐದು ಸಾವಿರ ರೂಪಾಯಿ ಗಳನ್ನು ನೀಡಿದ್ದು *ಶಾಲೆಯ ಆವರಣದಲ್ಲಿ ಅಕ್ಷರತಾಯಿ ಲೂಸಿ ಸಾಲ್ಡಾನರವರ ಹೆಸರಿನಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ನಮ್ಮಲ್ಲರ ಹೊಣೆ ಎಂದರು
ಇನ್ನು ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರು ಮಾತೆಯರು ಹಾಗೂ ಶಿಕ್ಷಕ ವೃಂದ ಸಹ ಭಾಗಿ ಯಾಗಿದ್ದರು ಕಾರ್ಯಕ್ರಮದಲ್ಲಿ ಶಾರಧಾ ಪೂಜಾರ್ತಿ ಸರ್ವರನ್ನು ಸ್ವಾಗತಿಸಿದರು. ಹಾಗೂ ಸವಿತಾ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರೇಮಾ ಪುಜಾರ,ಶೈಲಜ,ದೀಪಾ, ಹಾಗೂ ಫೌಂಡೇಶನ್ ಸದಸ್ಯರು ಶಾಲೆಯ ಮುದ್ದು ಮಕ್ಕಳು ಹಾಜರಿದ್ದರು,
ಪವರ್ ಆಫ್ ಯುಥ್ಸ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರು,ರವಿಚಂದ್ರನ್ ದೊಡ್ಡಿಹಾಳ ವಂದಿಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..