ರಾಜ್ಯದಲ್ಲಿ ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿ ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು – ನೀತಿ ಸಂಹಿತಿಯ ಮುನ್ನವೇ ರಾಜ್ಯದಲ್ಲಿ ಜಾರಿಯಾಗುತ್ತಾ 7ನೇ ವೇತನ ಆಯೋಗ…..

Suddi Sante Desk
ರಾಜ್ಯದಲ್ಲಿ ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿ ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು – ನೀತಿ ಸಂಹಿತಿಯ ಮುನ್ನವೇ ರಾಜ್ಯದಲ್ಲಿ ಜಾರಿಯಾಗುತ್ತಾ 7ನೇ ವೇತನ ಆಯೋಗ…..

ಬೆಂಗಳೂರು

ರಾಜ್ಯದಲ್ಲಿ ಚುನಾವಣೆಯ ಮುನ್ನವೇ ನೀತಿ ಸಂಹಿತಿ ಜಾರಿಯಾಗುವ ಮುನ್ನವೇ 7ನೇ ವೇತನ ಆಯೋಗವನ್ನು ಜಾರಿಗೆ ಮಾಡಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಇದಕ್ಕಾಗಿ ಹಣವನ್ನು ಮೀಸಲು ಇಡಲಾಗಿದೆ ಎಂದು ಹೇಳಿದ್ದು ಇನ್ನೂ ಈ ಒಂದು ನಿರೀಕ್ಷೆಯಲ್ಲಿ ಕರ್ನಾಟಕದ ಸಮಸ್ತ ಸರ್ಕಾರಿ ನೌಕರರು ಕಾಯುತ್ತಿದ್ದಾರೆ. 2023-2024ನೇ ಹಣಕಾಸು ವರ್ಷದ ಬಜೆಟ್ ಅನ್ನು ಮಂಡನೆ ಮಾಡಿದ ಮುಖ್ಯಮಂತ್ರಿಯವರು ಬಜೆಟ್ ಮಂಡನೆ ವೇಳೆ ಹಲವಾರು ಘೋಷಣೆ ಗಳನ್ನು ಮಾಡಿದ್ದು

ಈ ಒಂದು ವಿಚಾರ ಕುರಿತಂತೆ ಏನನ್ನು ಪ್ರಸ್ತಾಪ ಮಾಡದಿದ್ದರೂ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿಯನ್ನು ನೀಡಿದ್ದಾರೆ. ಕರ್ನಾಟ ಕದಲ್ಲಿ 7ನೇ ವೇತನ ಆಯೋಗವನ್ನು ಜಾರಿ ಮಾಡಲಾಗುತ್ತದೆ ಹಲವಾರು ರಾಜ್ಯಗಳಲ್ಲಿ 7ನೇ ವೇತನ ಆಯೋಗವನ್ನು ಜಾರಿ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಈವರೆಗೂ 7ನೇ ವೇತನ ಆಯೋಗವನ್ನು ಜಾರಿ ಮಾಡಲಾಗಿಲ್ಲ ಆದರೆ ಈಗ ಸರ್ಕಾರವು ಶೀಘ್ರವೇ 7ನೇ ವೇತನ ಆಯೋಗವನ್ನು ಜಾರಿ ಮಾಡುವ ನಿರ್ಧಾರ ಮಾಡಿದೆ

ಇದಕ್ಕಾಗಿ ಸುಮಾರು 6,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.ಆದರೆ ಬಜೆಟ್ ನಲ್ಲಿ ಏನನ್ನೂಹೇಳದ ಮುಖ್ಯಮಂತ್ರಿ ಲಿಖಿತವಾಗಿ ಮತ್ತೊಂದು ಉತ್ತರ ವನ್ನು ನೀಡಿ ಈಗ ಮಾಧ್ಯಮದವರ ಮುಂದೆ ಹೀಗೆ ಹೇಳಿದ್ದನ್ನು ಹೇಗೆ ನಂಬೊದು ಎಂಬ ಮಾತನ್ನು ಕೇಳುತ್ತಿದ್ದಾರೆ.ಆದರೂ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯದ ಹಣಕಾಸು ಖಾತೆ ಯನ್ನು ಹೊಂದಿರುವ ಕರ್ನಾಟಕ ರಾಜ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಶೀಘ್ರವೇ 7ನೇ ವೇತನ ಆಯೋಗವನ್ನು ಜಾರಿ ಮಾಡಲಾಗುತ್ತದೆ

ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್‌ ನೇತೃತ್ವದ ಸಮಿತಿಯು 7ನೇ ವೇತನ ಆಯೋಗದ ವರದಿಯನ್ನು ನೀಡಲಿದೆ ಕರ್ನಾಟಕ ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ವರದಿಯಲ್ಲಿ ವಿವರಣೆ ನೀಡಲಿದ್ದಾರೆ ಎಂದು ತಿಳಿಸಿದ್ದು ಆದರೂ ಮುಖ್ಯಮಂತ್ರಿ ಮೇಲೆ ದೊಡ್ಡದಾದ ನಿರೀಕ್ಷೆಯನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ತುದಿಗಾಲಲ್ಲಿ ನಿಂತುಕೊಂಡು ಕಾಯು ತ್ತಿದ್ದಾರೆ.

ಇನ್ನೂ ಇತ್ತ ಈ ಒಂದು ವಿಚಾರ ಕುರಿತಂತೆ ಚರ್ಚೆಯನ್ನು ಮಾಡಲು ರಾಜ್ಯದ ಸರ್ಕಾರಿ ನೌಕರರ ಸಂಘಟನೆ ತುರ್ತು ಸಭೆಯನ್ನು ಕರೆ ದಿದ್ದು ಮುಂದೇನು ಆಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.ಒಟ್ಟಾರೆ ಮುಖ್ಯಮಂತ್ರಿ ಬಜೆಟ್ ನ ಸದನದಲ್ಲಿ ಒಂದು ಹೇಳಿ ಲಿಖಿತವಾಗಿ ಮತ್ತೊಂದು ಹೇಳಿ ಈಗ ಮಾಧ್ಯಮದವರ ಮುಂದೆ ಇನ್ನೊಂದು ಹೇಳಿ ಇತ್ತ ಇದೇಲ್ಲವನ್ನು ಕಂಡುಕೊಂಡಿರುವ ಸರ್ಕಾರಿ ನೌಕರರ ಸಂಘಟನೆ ತುರ್ತು ಸಭೆಯನ್ನು ಕರೆದಿದ್ದು ಮುಂದೇನು ಆಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.