ಬೆಂಗಳೂರು –
ನಾಳೆಯಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭ – 7ನೇ ವೇತನ ಆಯೋಗ,ಹಳೆ ಪಿಂಚಣಿ ಯೋಜನೆ ಘೋಷಣೆ…..ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು
ಫೆಬ್ರುವರಿ 12 ರಿಂದ ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ನಡೆಯಲಿದೆ.ಬೆಂಗಳೂರಿನ ವಿಧಾನ ಸೌಧ ದಲ್ಲಿ ಈ ಒಂದು ಅಧಿವೇಶನ ನಡೆಯಲಿದ್ದು ಈಗಾಗಲೇ ಅಧಿವೇಶಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಇನ್ನೂ ಪ್ರಮುಖವಾಗಿ ಈ ಒಂದು ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ಕಾರಿ ನೌಕರರು ಬಹಳ ದಿನಗಳಿಂದ ನಿರೀಕ್ಷೆಯನ್ನು ಮಾಡುತ್ತಿರುವ 7ನೇ ವೇತನ ಆಯೋಗ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡ್ತಾರೆ
ಈ ಎರಡು ಯೋಜನೆಗಳಿಗೆ ಅನುದಾನವನ್ನು ಮೀಸಲಿಡುತ್ತಾರೆಯಾ ಈ ಎರಡು ಪ್ರಶ್ನೆಗಳಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರು ತುದಿಗಾ ಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಈಗಾ ಗಲೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗ ಳಿಂದ ಆರ್ಥಿಕವಾಗಿ ಒಂದಿಷ್ಟು ಹೊರೆಯನ್ನು ಮಾಡಿಕೊಂಡಿದ್ದು
ಆದ್ರೂ ಕೂಡಾ ಮುಖ್ಯಮಂತ್ರಿಯವರು ರಾಜ್ಯದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ 7ನೇ ವೇತನ ಆಯೋಗ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡುತ್ತಾರೆ ಎಂಬ ನಂಬಿಕೆಯ ನಿರೀಕ್ಷೆಯಲ್ಲಿ ನೌಕರರು ಇದ್ದಾರೆ.
ಇತ್ತ ರಾಜ್ಯದ ನಾಡದೊರೆಯವರು ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಈ ಎರಡು ವಿಚಾರದಲ್ಲಿ ಗುಡ್ ನ್ಯೂಸ್ ನೀಡುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..