ಬೆಂಗಳೂರು –
ಹೌದು ರಾಜ್ಯದ ಸರ್ಕಾರಿ ನೌಕರರು ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ಬಳಿ ಪ್ರಮುಖವಾದ ಬೇಡಿಕೆ ಯೊಂದನ್ನು ಇಟ್ಟಿದ್ದಾರೆ.ತಮ್ಮ ಇದುವರೆಗಿನ ಅಪಾರ ಸಹನ ಶಕ್ತಿಗೆ ಕೋಟಿ ನಮನಗಳು ಸಂಘರ್ಷ ಪ್ರತಿರೋಧ ಇರದಂತೆ ಸರಕಾರದಿಂದ ಬೆಣ್ಣೆಯಲಿ ಕೂದಲೆಳೆ ಬೇರ್ಪಡಿಸಿದಂತೆ ಅನೇಕ ಕೆಲಸ ಕಾರ್ಯಗಳನು ಮಾಡಿದ್ದೀರಿ.ಲಕ್ಷಾಂತರ ನೌಕರರ ಸಾವಿರಾರು ಸಮಸ್ಯೆಗಳ ಭಿನ್ನ ಭಿನ್ನ ಅಭಿಪ್ರಾಯಗಳೆಲ್ಲವನೂ ಸಹಿಸಿಕೊಂಡಿದ್ದೀರಿ
ಸಹನೆಯ ಕಟ್ಟೆಯೊಡೆದು ಸಹನೆ ಎಂದರೆ ದೌರ್ಬಲ್ಯವಲ್ಲವೆಂಬ ಸಂದೇಶ ನೀಡಲು ಮಂಗಳವಾರ ಹೋರಾಡದ ಸಭೆ ಕರೆದಿರೋದು ಸಂತಸದ ವಿಷಯ.ಆದರೆ ಮತ್ತೇ ತಮಗೆ ಕಿವಿಮಾತು ವೇತನ ಆಯೋಗ ರಚನೆಯಂತೂ ಆಗಿದೆ.ಅದು ವರದಿ ಕೊಡದೇನೇ ಮಾಯವಾ ಗದು ಒಂದಿಷ್ಟು ತಡವಾದೀತು ಅಷ್ಟೇ.ಮಧ್ಯಂತರ ಪರಿಹಾರಕ್ಕೂ ಅವಸರವಿಲ್ಲ ಆದರೆ ಈಗ ನಿರ್ಧಿಷ್ಟವಾಗಿ NPS TO OPS ಆಗಲೇಬೇಕೆ ನ್ನುವ ಯಾವ ರಾಜೀ ಮುಲಾಜಿಲ್ಲದೇ
ತಾವು ಹಠಯೋಗಿಯಂತೆ ಕುಳಿತರೆ ನಾಳೆ ಚುನಾವಣೆಯಲ್ಲಿ ಏನೋ ಆಗಲಿ ಆದರೆ ಇಡೀ ಕರುನಾಡಿನ ನೌಕರರು ತಮ್ಮ ಸಂಧ್ಯಾಕಾಲದ ಪ್ರತಿ ತುತ್ತಿನ ಅನ್ನದಲೂ ನಿಮ್ಮನ್ನು ನೆನೆದು ತಿನ್ನುವಂತಾಗುತ್ತದೆ.ಹಾಗಾಗಿಯೇ, ಎರಡು ಬೇಡಿಕೆಗಳಿಗೆ ಹೋರಟವಾಗಲಿ ನಿಜವಾದ ಮಾಡು ಇಲ್ಲವೇ ಮಡಿ ನಿಮ್ಮಿಂದ ಪ್ರಾರಂಭ ವಾಗಲಿ.ಸಮಸ್ತ NPS OPS ನೌಕರರು, ಕರ್ನಾಟಕ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..