ಚಾಮರಾಜನಗರ –
ಎಲ್ಲಾ ಅಧಿಕಾರಿಗಳು ಹೊಲಸು ತಿಂದಿದ್ದಾರೆ ಹೀಗೆ ಹೇಳುತ್ತಾ ಸರ್ಕಾರಿ ಅಧಿಕಾರಿಗಳ ಬಗ್ಗೆ ಸಚಿವ ವಿ ಸೋವಣ್ಣ ಕಂಡಾಮಂಡಲವಾಗಿ ಮಾತನಾಡಿದ್ದಾರೆ.ಹೌದು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಮಾತನಾಡಿದ ಸಚಿವರು ಗಣಿಗಾರಿಕೆಯ ವಿಚಾರದಲ್ಲಿ ಅಧಿಕಾರಿಗಳ ವಿರುದ್ದ ಸಚಿವ ವಿ ಸೋಮಣ್ಣ ಕೆಂಡಾಮಂಡಲವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.ಗಣಿಕಾರಿಕೆ ಪ್ರದೇಶದಲ್ಲಿ ಗುಡ್ಡ ಕುಸಿದು ಕಾರ್ಮಿಕರು ಸಾವನಪ್ಪಿರುವ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆಗಿ ಮಾತನಾಡಿದರು ವಸತಿ ಸಚಿವ ಸೋಮಣ್ಣ.

ಅಕ್ರಮ ನಡೆಯುತ್ತಿರವುದು ಅಧಿಕಾರಿಗಳಿಗೆ ಗೊತ್ತಿರಲಿ ಲ್ಲವೇ ಅಕ್ರಮದ ಬಗ್ಗೆ ತಹಶೀಲ್ದಾರ್ ಸರ್ವೇ ಅಧಿಕಾರಿ ಹಾಗೂ ADLR ಅವರಿಗೆ ಗೊತ್ತಿರಲಿಲ್ಲವೇ ಎಲ್ಲಾರು ಸಹ ಗಣಿ ಉದ್ಯಮಿಗಳ ಬಳಿ ಹಣ ಪಡೆದು ಹೊಲಸು ತಿನ್ನೋ ಕೆಲಸ ಮಾಡಿದ್ದಾರೆಂದರು.
ಇನ್ನೂ ಎಲ್ಲಾ ಅಕ್ರಮಗಳ ಸೃಷ್ಟಿಕರ್ತರು ಅಧಿಕಾರಿಗಳೇ ಇವಾಗ ಕೈತೊಳೆದು ಕೊಂಡು ನಮ್ಮ ಮೇಲೆ ಹಾಕಿದ್ದಾರೆ ಸಚಿವ ಸೋಮಣ್ಣ ಮಾತಿಗೆ ತಬ್ಬಿಬ್ಹಾದರು ಶಾಸಕ ನಿರಂಜನ್ ಕುಮಾರ್ ಹಾಗೂ ಅಧಿಕಾರಿಗಳು.
ಮಂಜುನಾಥ ಸರ್ವಿ ಸುದ್ದಿ ಸಂತೆ ಹಿರಿಯ ವರದಿಗಾರರು