ಬೆಂಗಳೂರು –

……✍.
ರಾಜ್ಯದ ಅಂದಾಜು ಎಪ್ಪತ್ತು ಸಾವಿರ ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗಿದ್ದಾರೆ.ಅಲ್ವಾ …. ?ಮಾನ್ಯತೆ ಪಡೆದ ಶಿಕ್ಷಕರ ಸಂಘಕ್ಕೆ ಪ್ರತಿ ವರ್ಷ ಸದಸ್ಯತ್ವ ಶುಲ್ಕವನ್ನು ಸಂಘದ ಮಹಾನ್ ಪದಾಧಿ ಕಾರಿಗಳು ಚಾಚು ತಪ್ಪದೇ ಕಟಾವಣೆಮಾಡಿಸುತ್ತಾರೆ ನಾವುಗಳು…..ಯಾಕೊ? ಈ ತಿಂಗಳು 200/— ರೂ ಸಂಬಳ ಕಡಿಮೆ ಬಂದಿದೆ ಎಂದು ಸ್ನೇಹಿತರೋಡನೆ ಚರ್ಚಿಸಿ…ಹೋsss…. ಹೌದಾ ಅಂತ ಸುಮ್ಮನಾಗು ತ್ತೇವೆ ಅಲ್ಲವೇ? ಏಕೆಂದರೆ ನಾವೇ ಅಲ್ವೇ ನಮಗೆ ಬೇಕಾದವರನ್ನು ತಾಲೂಕ ಹಂತದಿಂದ ರಾಜ್ಯದವರೆ ಗೆ ಆಯ್ಕೆ ಮಾಡಿದ್ದು ನಾವು ಮಾಡೋದು ಹೀಗೆ ಅವರುಗಳು ಪದಗ್ರಹಣ ಮಾಡಿ ಹಾರ-ತುರಾಹಿ ಹಾಕಿಸಿಕೊಂಡ ಮೇಲೆ ಅವರದೇ ಆದ ಕಾರು ಬಾರು ಇಷ್ಟೇ ಅವರ ಕಥೆ. ಅದಕ್ಕೆ ಹೇಳೊದು ನಮಗೆ ಯಾರಿಗೆ ವರ್ಗಾವಣೆ ಬೇಕಾಗಿದೆಯೊ….?
ಎನ್ ಪಿ ಎಸ್…..ಸಿ & ಆರ್ ತಿದ್ದುಪಡಿ ಆಗಬೇಕಾ ಗಿದೆಯೋ… ? ಅವರುಗಳು ಹಾಗೂ ಇಷ್ಟು ವರ್ಷ ಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮುಖ್ಯ ಗುರುಗಳಾಗಿ ಪದೋನ್ನತಿ ಪಡೆಯದೇ ಸೇವೆಯಲ್ಲಿ ಜೂನಿಯರ್ ಅಡಿಯಲಿ ಸೇವೆ ಸಲ್ಲಿಸಲು ಬಯಸ ದವರು.ಈ ಜಟಿಲತೆಯಿಂದ ಹೊರ ಬನ್ನಿ . ಈಗಾಗಲೇ ಸದಸ್ಯತ್ವ ಶುಲ್ಕ ಕಟಾವಣೆ ಮಾಡಲು ಅಸಮ್ಮತಿ ಪತ್ರ ನೀಡಿದ್ದಾರೆ.ಇನ್ನೂ ನೀಡುತ್ತಿದ್ದಾರೆ . ಹಾಗಾದಾರೆ… ನೀವುಗಳು……..
ಈ ಮೇಲೆ ತಿಳಿಸಿದ 3 ಅಂಶಗಳಲ್ಲಿ ….
1.ಕಷ್ಟ ಸಾಧ್ಯವಾದರೆ ..
- ಅಂಶಗಳು ನಮಗೆ ಈಡೇರಬೇಕೆಂದರೆ …
ನಾವೇಲ್ಲರೂ 200/—ರೂ ಕಟಾವಣೆ ಮಾಡದಂತೆ ಅಸಮ್ಮತಿ ಪತ್ರ ಕೊಡಲೇಬೇಕು…ಆಗ ಸಂಘದ ಮಹಾನ್ ಪದಾಧಿಕಾರಿಗಳಿಗೆ ಬೆಂಕಿಯ ಬಿಸಿ ಮುಟ್ಟುತ್ತದೆ ನಾವುಗಳು ಪ್ರಾಜ್ಞರಲ್ಲವೇ..? ಮತಿವಂತರಲ್ಲವೇ….?
ನಿಮ್ಮಲ್ಲಿ ಲೇಖನಿ ಇಲ್ಲವೇ ? ಖಡ್ಗಕ್ಕಿಂತ ಹರಿತವಾದದ್ದು ಲೇಖನಿ ಎಂದು ನಾವೇಲ್ಲರೂ ಕೇಳಿಲ್ಲವೇ? ಅದೇ ಲೇಖನಿಯಿಂದ ಸಂಘದ ಪದಾಧಿಕಾರಿಗಳ ವಿರುದ್ಧ ಸಿಡಿದೆದ್ದು ಆ ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕ ಕಟಾವಣೆ ಮಾಡಿಸಲೇಬಾರದು ಎಂದು ಅಸಮ್ಮತಿ ಪತ್ರ ನೀಡಿದಾಗ ಸಂಘದ ಆದಾಯದ ಹಾದಿ ಬಂದಾಗುತ್ತದೆ. ಆಗ ಮಾತ್ರ ಪದಾಧಿಕಾರಿಗಳು ಶಿಕ್ಷಕರ ಬಗ್ಗೆ ಕಾಳಜಿ ವಹಿಸುತ್ತಾರೆಯೇ ವಿನಃ ನಮ್ಮ ಮೇಲೆ ಯಾವುದೇ ಗಮನವನ್ನು ಹರಿಸುವುದಿಲ್ಲ ಕೇವಲ ಶುಲ್ಕ ವಸೂಲಾತಿ ಖರ್ಚು ಮಾಡುವುದರಲ್ಲಿ ತಲ್ಲೀನರಾಗಿರುತ್ತಾರೆ ……
ಅದಕ್ಕಾಗಿ ಸಮಸ್ತ ರಾಜ್ಯದ ವರ್ಗಾವಣೆ ಅಪೇಕ್ಷಿತ / ಸಿ & ಆರ್ ತಿದ್ದುಪಡಿ ಅಪೇಕ್ಷಿತ ಶಿಕ್ಷಕರೇ ಜಾಗೃತರಾಗಿ……ಇನ್ನೊಂದು ಮುಖ್ಯ ವಿಚಾರ ಕೇವಲ ಕೆಲವು ಶಿಕ್ಷಕ/ಕಿಯರು ಸ್ಪಂದಿಸಿದರೆ …ಸಾಲದು
Unity is strength ಇದು ಸರ್ವರಿಗೂ ಗೊತ್ತಿರುವಂತದು. ಅವ್ರೂ ಮಾಡ್ತಾರೆ…..ಇವ್ರೂ ಮಾಡ್ತಾರೆ ಬಿಡು ,ನಾನು ಯಾಕೆ? ಎಲ್ರೂ ದೃಷ್ಟಿಯಲಿ ಬರಲಿ ಅಂತ ಅಳುಕಿಂದ ಕುಳಿತರೆ ……..ನಾವು ಇಲ್ಲೇ ……..ಅವರು ಅಲ್ಲೇ ಮಜೇಲಿ. ತೇಲಾಡುವರು….
ಅಷ್ಟೇ….ಏನು ಮಾಡಬೇಕೆಂದು ನಿರ್ಧಾರ ಮಾಡೋದು ನೀವು.
“ನಿಮ್ಮ ನಿರ್ಧಾರ ,ನಿಮ್ಮ ಒಳಿತು, ನಿಮ್ಮಯೋಚನೆಯಲಿ”
?????