ಬೆಂಗಳೂರು –
ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ನಿಲ್ಲಿಸಲಾಗಿದ್ದ ಶಿಕ್ಷಕರ ವರ್ಗಾವಣೆ ಮತ್ತೆ ಆರಂಭವಾಗಲಿದೆ.ನವಂಬರ್ 24 ರಂದು ನಡೆಯಬೇಕಾಗಿದ್ದ ಈ ಒಂದು ವರ್ಗಾವಣೆ ಪ್ರಕ್ರಿಯ ಮತ್ತೆ ಆರಂಭವಾಗಲಿದ್ದು ಸೋಮವಾರದಿಂದ ಮತ್ತೆ ನಡೆಯಲಿದೆ. ಹೌದು ನವಂಬರ್ 24 ರಿಂದ ನಡೆಯ ಬೇಕಾಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಈ ಒಂದು ವರ್ಗಾವಣೆಯನ್ನು ಎರಡು ದಿನಗಳಿಂದ ನಿಲ್ಲಿಸ ಲಾಗಿತ್ತು ಮಂಜೂರಾದ ಹುದ್ದೆಗಳ ಮೇಲೆ ಮಾಡುವಂತೆ ಸೂಚನೆ ನೀಡಿ ಮುಂದೂಡಲಾಗಿತ್ತು ಸಧ್ಯ ಮತ್ತೆ ಎಲ್ಲಾ ಸಿದ್ದತೆಗಳು ಮುಕ್ತಾಯಗೊಂಡ ಹಿನ್ನಲೆಯಲ್ಲಿ ಈ ಒಂದು ವರ್ಗಾವಣೆಯ ಪ್ರಕ್ರಿಯೆಯನ್ನು ಮತ್ತೆ ಸೋಮವಾರದಿಂದ ಶುರುವಾಗಲಿದ್ದು ಇಂದು ನೂತನ ಹೊಸ ವರ್ಗಾವಣೆಯ ವೇಳಾಪಟ್ಟಿ ಪ್ರಕಟವಾಗಲಿದೆ.
ಬೆಳಿಗ್ಗೆ ಹನ್ನೊಂದು ಗಂಟೆಗೆ ಈ ಒಂದು ಹೊಸ ವೇಳಾಪಟ್ಟಿ ಪ್ರಕಟವಾಗಲಿದ್ದು ನಂತರ ವರ್ಗಾವಣೆ ನಡೆಯಲಿದ್ದು ಇದರಲ್ಲಾದರೂ ನೊಂದುಕೊಂಡಿರುವ ಶಿಕ್ಷಕರಿಗೆ ಅನುಕೂ ಲವಾಗುತ್ತದೆನಾ ಎಂಬ ಹೊಸ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕರಿದ್ದು ಹೀಗಾಗಿ ಏನೇನಾಗುತ್ತದೆ ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ.ಜೊತೆಗೆ ಎಲ್ಲರ ಚಿತ್ತ ಇಂದು ಬಿಡುಗಡೆ ಯಾಗುವ ವರ್ಗಾವಣೆಯ ಹೊಸ ವೇಳಾಪಟ್ಟಿಯತ್ತ ನೆಟ್ಟಿದೆ.