ಬೆಂಗಳೂರು –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೂಂದು ಸುದ್ದಿ ಬಹಿ ರಂಗವಾಗಿದೆ. ಆ ಸಿಡಿ ಯಲ್ಲಿರುವ ಯುವತಿಯ ಜೊತೆಯಲ್ಲಿ ಉತ್ತರ ಕರ್ನಾಟಕ ಮೂಲದ ಶಾಸಕ ರೊಬ್ಬರ ಜೊತೆ ಸುಮಾರು 4 ತಿಂಗಳು ಗಳಿಂದ ಗಳಿಂದ ಶಾಸಕರೊಬ್ಬರೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.ಈ ಒಂದು ಸ್ಪೋಟಕ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.
ಆ ಶಾಸಕರು ಯುವತಿಯ ಪ್ರತಿ ನಡೆಯನ್ನು ಮತ್ತೂಂದು ಪಕ್ಷದ ಶಾಸಕರೊಬ್ಬರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ. ಆದರೆ, ಬಿಜೆಪಿಯ ಆ ಶಾಸಕ ಜಾರಕಿಹೊಳಿ ಸಹೋ ದರರ ಜೊತೆ ಗುರುತಿಸಿಕೊಂಡಿಲ್ಲ.ಅವರ ರಾಜ ಕೀಯ ವಿರೋಧಿ ಬಣದಲ್ಲಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಆ ಶಾಸಕರೊಬ್ಬರಿಗೆ ಸಿ.ಡಿ. ಹಿಂದಿನ ರಹಸ್ಯ ನಾಲ್ಕೈದು ತಿಂಗಳ ಹಿಂದೆಯೇ ಗೊತ್ತಿತ್ತು ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಯುವತಿಯ ಸಿಡಿಆರ್ ಶೋಧಿಸಿದಾಗ ಆ ಶಾಸಕರ ಮೊಬೈಲ್‌ಗೆ ನಿರಂತರವಾಗಿ ಕರೆಗಳು ಹೋಗಿರುವು ದು ಪತ್ತೆಯಾಗಿದೆ. ಶಾಸಕನು ಯುವತಿಗೆ ವಾಟ್ಸ್ ಆಪ್ ಕಾಲ್‌ಗಳನ್ನು ಹೆಚ್ಚು ಮಾಡಿರುವುದು ತಿಳಿದು ಬಂದಿದೆ. ಯುವತಿಯಿಂದ ನರೇಶ್ ಗೌಡ ಹಾಗೂ ಶ್ರವಣ್‌ಗೂ ಕರೆಗಳು ಹೋಗಿರುವುದು ಗೊತ್ತಾಗಿದೆ.
ಸಿ.ಡಿ. ಪ್ರಕರಣದ ಶಂಕಿತ ಆರೋಪಿಗಳು ಆಗಾಗ ಸ್ಥಳ ಬದಲಾಯಿಸುತ್ತಿದ್ದಾರೆ ಎಂಬುದು ತನಿಖಾ ಧಿಕಾರಿಗಳಿಗೆ ತಿಳಿದು ಬಂದಿದೆ.ಪ್ರಕರಣದ ಕಿಂಗ್ ಪಿನ್‌ಗಳು ಎನ್ನಲಾದ ಇಬ್ಬರು ಪತ್ರಕರ್ತರು ಹಾಗೂ ಯುವತಿ ಗಂಟೆಗೊಮ್ಮೆ ಸ್ಥಳವನ್ನು ಬದಲಾಯಿ ಸುತ್ತಿದ್ದು, ಹೀಗಾಗಿ ಆರೋಪಿತರ ಪತ್ತೆ ಸಾಧ್ಯವಾಗು ತ್ತಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ತನ್ನ ಹೇಳಿಕೆಯ ವೀಡಿಯೋ ಬಿಡುಗಡೆ ಮಾಡಿದ್ದ ನರೇಶ್ ಗೌಡನ ಜಾಡು ಹಿಡಿದಾಗ ಆತ ದಿಲ್ಲಿಯಿಂದ ಸುಮಾರು 200ಕಿ.ಮೀ ದೂರದಲ್ಲಿರುವುದು ತಿಳಿದುಬಂದಿತ್ತು. ಆತನನ್ನು ವಶಕ್ಕೆ ಪಡೆಯಲು ಎರಡು ತಂಡಗಳು ದಿಲ್ಲಿಗೆ ತೆರಳಿದ್ದವು. ಆದರೆ ಪ್ರಯೋಜನವಾಗಲಿಲ್ಲ. ನರೇಶ್ ಗೌಡ ಜತೆ ಶ್ರವಣ್ ಹಾಗೂ ಯುವತಿಯೂ ಇದ್ದಾಳೆ. ಶ್ರವಣ್ ಹ್ಯಾಂಕರ್ ಆಗಿದ್ದು, ಸಾಫ್ಟ್ವೇರ್, ಮೊಬೈಲ್, ಲೊಕೇಷನ್ ಸೇರಿ ಎಲ್ಲವನ್ನು ಹ್ಯಾಕ್ ಮಾಡುವ ನೈಪುಣ್ಯ ಹೊಂದಿದ್ದು ಏನೇ ಆಗಲಿ ಇಷ್ಟೊಂದು ತನಿಖೆಯಿಂದ ಹೊರಬಂದಿದ್ದು ಪೊಲೀಸರು ಬಿಡುವಿಲ್ಲದೇ ತನಿಖೆಯನ್ನು ಮಾಡತಾ ಇದ್ದಾರೆ.