ಶಿಕ್ಷಕರ ವರ್ಗಾವಣೆ ನಿಯಮಗಳ ಸಮಸ್ಯೆ ಗಳ ಕುರಿತಂತೆ ಇತ್ತೀಚೆಗೆ ರಾಜ್ಯ ಮಟ್ಟದ ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ರಾಜ್ಯಾದ್ಯಂತ ಹಲವಾರು ವರ್ಗಾ ವಣೆ ವಂಚಿತ ಶಿಕ್ಷಕ ಶಿಕ್ಷಕಿಯರು ವೆಬಿನಾರನಲ್ಲಿ ಭಾಗವ ಹಿಸಿ ವರ್ಗಾವಣೆ ನಿಯಮಗಳಲ್ಲಿರುವ ಸಮಸ್ಯೆಗಳನ್ನು ಹಂಚಿಕೊಂಡಿದ್ದರು. ಆ ಸಮಸ್ಯೆಗಳನ್ನು ಕ್ರೋಢೀಕರಿಸಿ. ನ್ಯಾಯ ಸಮ್ಮತವಾದ ಶಿಕ್ಷಕರ ಸ್ನೇಹಿ ವರ್ಗಾವಣೆಯಲ್ಲಿ ಅಳವಡಿಸಬೇಕಾದ ಪ್ರಮುಖ ನಿಯಮಗಳನ್ನು ಪಟ್ಟಿ ಮಾಡಿದೆ. ಪ್ರಸ್ತುತ ಶಿಕ್ಷಕರ ವರ್ಗಾವಣೆ ನಿಯಮಗಳನ್ನು ತಿದ್ದುಪಡಿ ಮಾಡಿ ವರ್ಗಾವಣೆ ವಂಚಿತ ಶಿಕ್ಷಕ ಶಿಕ್ಷಕಿಯರಿಗೆ ನ್ಯಾಯ ಒದಗಿಸಿ ಅನುಕೂಲ ಮಾಡಿ ಕೊಡಬೇಕೆಂದು ಘನ ಸರಕಾರಕ್ಕೆ ಮನವಿ ಮಾಡಿದೆ.


