ಚಿಕ್ಕಮಗಳೂರು –
ಸಧ್ಯ ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಹಿಜಾಬ್ ಗದ್ದಲವೇ ಗದ್ದಲ ಹೀಗಿರುವಾಗ ಚಿಕ್ಕಮಗಳೂರು ತಾಲೂಕಿನ ಇಂದಾ ವರ ಶಾಲೆಯಲ್ಲಿ ಹಿಜಾಬ್ಗಾಗಿ ಗಲಾಟೆ ನಡೆದಿತ್ತು.ಸ್ಥಳಕ್ಕೇ ಆಗಮಿಸಿ ಗಲಾಟೆಯನ್ನು ತಿಳಿಗೊಳಿಸಿದ ಅಧಿಕಾರಿಗಳು ಅಲ್ಲಿಂದ ಎಲ್ಲವೂ ಮುಗಿಯಿತು ಎಂದುಕೊಂಡು ಸ್ಥಳ ದಿಂದ ತೆರಳದೇ ಶಾಲೆಯ ಒಳಗೆ ತೆರಳಿ ಮಕ್ಕಳಿಗೆ ಪಾಠ ವನ್ನು ಮಾಡಿದ್ದಾರೆ.

ಹೌದು ಜಿಲ್ಲಾಧಿಕಾರಿ,ಎಸ್ಪಿ ಮತ್ತ ಜಿಲ್ಲಾ ಪಂಚಾಯತ ಸಿಇಓ ಹೀಗೆ ಮೂವರು ಅಧಿಕಾರಿಗಳು ಸೇರಿಕೊಂಡು ಕ್ಲಾಸ್ ನಲ್ಲಿ ಮಕ್ಕಳಿಗೆ ಪಾಠವನ್ನು ಮಾಡಿದ್ದು ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಅಧಿಕಾರಿಗಳು ಪಾಠವನ್ನು ಮಾಡುತ್ತಿರುವುದು ವೈರಲ್ ಆಗಿದೆ.ಅದೇ ಶಾಲೆಯಲ್ಲಿಯೇ ಚಿಕ್ಕಮಗಳೂರು ಜಿಲ್ಲಾಧಿಕಾರಿ,ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ,ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಭೇಟಿ ನೀಡಿ,ಶಾಲಾ ಮಕ್ಕಳಿಗೆ ಪಾಠ ಮಾಡಿದ್ದು ಕರ್ತವ್ಯದೊಂದಿಗೆ ಮಕ್ಕಳಿಗೆ ಪಾಠವನ್ನು ಮಾಡಿ ದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.