This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಮಾನ್ಯ ಷಡಕ್ಷಾರಿ ಅವರಿಗೆ ರಾಜ್ಯ ಸರ್ಕಾರಿ ನೌಕರರ ಪರವಾಗಿ ಮನವಿ – ಹಲವರಿಂದ ಬಹಿರಂಗ ಮನವಿ…..ದಯಮಾಡಿ ತುಂಬಾ ಅವಶ್ಯಕತೆಯ ಮನವಿ ಒಮ್ಮೆ ನೋಡಿ ರಾಜ್ಯಾಧ್ಯಕ್ಷರೇ…..

WhatsApp Group Join Now
Telegram Group Join Now

ಬೆಂಗಳೂರು –

ಮಾನ್ಯರೇ,

ವಿಷಯ -ರಾಜ್ಯ ಸರ್ಕಾರಿ ನೌಕರರಿಗೆ ತಕ್ಷಣದಿಂದಲೇ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS)(ನಗದು ರಹಿತ ವೈದ್ಯಕೀಯ ಚಿಕಿತ್ಸೆ) ಮಂಜೂರು ಮಾಡಿಸುವ ಬಗ್ಗೆ.

ಈ ಮೇಲಿನ ವಿಷಯವಾಗಿ ಸಮಸ್ತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ನಗದುರಹಿತ ಆರೋಗ್ಯ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ.

ಹಾಗೇಯೇ ನಮ್ಮಕರ್ನಾಟಕ ರಾಜ್ಯದಲ್ಲಿಯೂ ಸಹ ಪೋಲೀಸ್ ಇಲಾಖೆಯಲ್ಲಿ ಈಗಾಗಲೇ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪೂರ್ಣಪ್ರಮಾಣದಲ್ಲಿ ಜಾರಿಯಲ್ಲಿ ಇದೆ.

ಹಾಗೇಯೇ ನಮ್ಮ ಕರ್ನಾಟಕ ಘನ ರಾಜ್ಯಸರ್ಕಾರವು ಸಹ ಕರೋನಾ 3ಆಲೆಯ ಮುನ್ಸೂಚನೆ ಆತಂಕದ ಹಿನ್ನಲೆ ಯಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)ಸರ್ಕಾರಿ ನೌಕರಿಗಾಗಿ ಮಂಜೂರು ಮಾಡುವ ಅವಶ್ಯಕತೆ ಇರುತ್ತದೆ.

  • ಹೆಚ್ಚುತ್ತಿರುವ ಹಣದುಬ್ಬರದ ಹಿನ್ನಲೆಯಲ್ಲಿ ಸರ್ಕಾರಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೇ ಪಡೆದು ಕೊಳ್ಳುವುದು ದುಸ್ಸಾರ ವಾಗುತ್ತ ಇದೆ
    ???????
    ಹಾಗೆಯೇ ಮುಂದುವರೆದು ರಾಜ್ಯಸರ್ಕಾರಿ ನೌಕರರು ಈಗ ಜಾರಿಯಲ್ಲಿ ಇರುವ ಹಳೆಯ ಪದ್ದತಿಯಲ್ಲಿ ಚಿಕಿತ್ಸೆ ಪಡೆದು ಮೆಡಿಕಲ್ ಬಿಲ್ ಗಳನ್ನು ಸಂಬಂದಿಸಿದ ಕಛೇರಿಗೆ ಸಲ್ಲಿಸಿ ನಂತರ TP ಹಾಗೂ ZP ಮುಖಾಂತರ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಬಿಲ್ ಪರೀಶೀಲನೆ ಆಗ ಬೇಕಾಗಿರುತ್ತದೆ.ಇದರಿಂದ ಸರ್ಕಾರಿ ನೌಕರರು ಪ್ರತಿ ಹಂತದಲ್ಲೂ ಕಛೇರಿಗೆ ಬರಬೇಕಾಗಿರುತ್ತದೆ.

ಹಾಗೂ ಪೂರ್ಣ ಪ್ರಮಾಣದಲ್ಲಿ ಮೆಡಿಕಲ್ ಬಿಲ್ ಹಣಬರುವುದಿಲ್ಲ.

ಇದರಿಂದ ಸರ್ಕಾರಿ ನೌಕರರು ಮಾನಸಿಕಸೈರ್ಯ ಕುಗ್ಗಿ ಹೋಗುತ್ತದೆ.ಸಾಮಾನ್ಯ ಜನರು BPL ಕಾರ್ಡ ವ್ಯವಸ್ಥೆ ಯಡಿ ಉಚಿತ ಚಿಕಿತ್ಸೆಯನ್ನು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ‌ಸರ್ಕಾರಿ ಆಸ್ಪತ್ರೆಗಳಲ್ಲಿ, ಜಯದೇವ ಆಸ್ಪತ್ರೆಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತ ಇದ್ದಾರೆ.

ಆದರೆ ಸರ್ಕಾರಿ ನೌಕರರು ನಿರ್ದಿಷ್ಟ ಪಡಿಸಿದ ವೆಚ್ಚವನ್ನು ಪಾವತಿಸಿ ಚಿಕಿತ್ಸೆ ಪಡೆದು ನಂತರ ಮೆಡಿಕಲ್ ಬಿಲ್ ಮಂಜೂರಿಗೆ ಶ್ರಮಪಡಬೇಕಾಗುತ್ತದೆ.

ಇದರಿಂದ ನೌಕರರ ಸಮಯ ವ್ಯರ್ಥ,ಕೆಲಸಕ್ಕೆ ರಜೆ ಹಾಕಬೇಕಾಗುತ್ತದೆ.

ಸಾಮಾನ್ಯ ಜನರಿಗೆ ಬರುವ ಹಾಗೆ ನೌಕರರಿಗೆ ಬರುವ ಹೃದಯ ಸಂಬಂಧವಾದ ಕಾಯಿಲೆಗಳು,ನರರೋಗ ಸಮಸ್ಯೆ, ಕಿಡ್ನಿಸಮಸ್ಯೆ,ಕ್ಯಾನ್ಸರ್,ಷುಗರ್ ಸಮಸ್ಯೆ, ಕೋರೋನಾ ಪ್ರಕರಣಗಳು, ಅಪಘಾತದಿಂದ ಪ್ರಕರಣ ಗಳು,ಮೂಳೆಮೂರಿತ ಪ್ರಕರಣಗಳು,ಮಾನಸಿಕ ಸಮಸ್ಯೆ ಗಳು,ಎಲ್ಲಾ ಪ್ರಕಾರದ ಸರ್ಜರಿ ಪ್ರಕರಣ ಗಳು,ಶ್ವಾಸಕೋಶ ಸಮಸ್ಯೆಗಳು,ಮಹಿಳಾ ನೌಕರರ ಸಮಸ್ಯೆ ಸಂಬಂದಿಸಿದ ಕಾಯಿಲೆಗಳು, ಎಲ್ಲಾ ವಿಧದ ಜ್ವರದ ಸಮಸ್ಯೆ (ಕೋರೋನಾ ಜ್ವರ,ಡ್ವೆಗ್ಯು,ಟೈಫಾಯಿಡ್, ಶೀತಜ್ವರ,ನೆಗಡಿ ಕೆಮ್ಮು ಇತ್ಯಾದಿ),ಸುಟ್ಟಗಾಯಗಳು,ಎಲ್ಲಾ ವಿಧದ ಪರೀಕ್ಷೆಗಳು(ರಕ್ಥ ಪರೀಕ್ಷೆ,ಎಕ್ಸರೆ,ECG,Eco,TMT,ಎಲ್ಲ ವಿಧದ MRIಪರೀಕ್ಷೆಗಳು,ಒಟ್ಟಿನಲ್ಲಿ ಮೆಡಿಕಲ್ ವಿಭಾಗದ ಎಲ್ಲಾ ಪರೀಕ್ಷೆಗಳು) ಇತ್ಯಾದಿ ಅನೇಕ ರೀತಿಯ ಕಾಯಿಲೆಗಳು ನೌಕರ ವರ್ಗದರಿಗೆ ದುಬಾರಿ ಖರ್ಚ ವೆಚ್ಚಗಳಿಗೆ ಕಾರಣವಾಗುತ್ತ ಇವೆ.

ದಿನೇ ದಿನೇ ಎಲ್ಲಾ ರೀತಿಯ ವಸ್ತುಗಳ ಬೆಲೆ ಹೆಚ್ಚು ಹೆಚ್ಚು ಆಗುತ್ತಾ ಇದೆ.ಜೀವನ ಅವಶ್ಯಕ ವಸ್ತುಗಳಬೆಲೆ ಹಾಗೂ. ಪೆಟ್ರೋಲ್(100.+ ರೂಪಾಯಿಗಳಿಗೂ ಅಧಿಕ) ಡೀಸಲ್ (90+ ಅಧಿಕ) ಹಾಗೂ ಅಡುಗೆಎಣ್ಣೆ(ಒನ್ ಟೂ ಡಬಲ್)ಬೆಲೆ ಹೆಚ್ಚು ಆಗಿದೆ.

ಹಾಗೇಯೇ ಕೋರೋನಾ ಸಂಕಷ್ಟಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಮನೆಯ ಇತರ ಸದಸ್ಯರ ಅನಾರೋಗ್ಯ ದಿಂದ ತುಂಬ ಖರ್ಚ ವೆಚ್ಚವಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ.ಮಕ್ಕಳ ವಿದ್ಯಾಭ್ಯಾಸದ ಫೀಜುಗಳು ಹಾಗೂ ಸಾರಿಗೆ ಶುಲ್ಕ ಹೆಚ್ಚಾಗಿವೆ.

ಕುಟುಂಬ ಸದಸ್ಯರ ಅನಾರೋಗ್ಯ,ಕುಟುಂಬ ನಿರ್ವಹಣೆಗೆ ಹೆಚ್ಚಿನ ಖರ್ಚುಗಳಿಂದ ಕಷ್ಟವಾಗುತ್ತಾ ಇದೆ.

ಸರ್ಕಾರಿ ನೌಕರರು ಕೋರೋನಾ 1ನೇ ಅಲೆ ಹಾಗೂ 2ನೇ ಅಲೆಯಲ್ಲಿ ಸರ್ಕಾರ ವಹಿಸಿದ ಕೋರೋನಾ ನಿರ್ವಹಣೆಯ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಪ್ರತಿ ತಿಂಗಳ ಮನೆಬಾಡಿಗೆ ಹೆಚ್ಚಾಗಿದೆ2ವರ್ಷಗಳಿಂದ ಸಮತಲದಲ್ಲಿದ್ದ ಮನೆ ಬಾಡಿಗೆ ದಿಢೀರ್ ಏರಿಕೆ ಕಂಡಿದೆ.

ಕೋರೋನಾ 2ನೇ ಅಲೆಯು ಈಗ ಕಡಿಮೆಯಾಗಿದೆ.ಹಾಗೂ 3ನೇ ಅಲೆಯು ಬರುವ ಮುನ್ಸೂಚನೆಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನೀಡಿದೆ.ಆದರೆ ಸದ್ಯಈಗ ಕೋರೋನಾ 3ನೇ ಅಲೆ ಬರುವ ಸೂಚನೆ ಸ್ವಷ್ಟವಾಗಿ ಕಾಣುತ್ತ ಇದೆ.ಪ್ರತಿ ದಿನ 250ರಿಂದ300 ಕೋರೋನಾ ಪ್ರಕರಣಗಳು ಬರುತ್ತಾ ಇದ್ದವು.ಈಗ ದಿಡೀರ ಏರಿಕೆ ಕಂಡಿವೆ. ದಿನಾಂಕ- 03-01-2022 ರಂದು 1290 ಕೋರೋನಾ ಪ್ರಕರಣಗಳಿಗೆ ಏರಿಕೆ ಕಂಡಿದೆ.

ಈಗ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಕರ್ನಾಟಕ ರಾಜ್ಯ ಸರ್ಕಾರವು “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” ಜಾರಿ ಮಾಡದಿದ್ದರೆ ನೌಕರರು ದಿನ ನಿತ್ಯದ ವಸ್ತುಗಳ ಬೆಲೆ ಹೆಚ್ಚಳದಿಂದ ಹಾಗೂ ನೌಕರರ ಮತ್ತು ಕುಟುಂಬ ಸದಸ್ಯರ ಅನಾರೋಗ್ಯ ಸಮಸ್ಯೆಯ ಖರ್ಚು ವೆಚ್ಚಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ.

ಸರ್ಕಾರಿ ನೌಕರರು ಕೋರೋನಾ 1ನೇ ಅಲೆಯಲ್ಲಿ ಹಾಗೂ 2ನೇ ಅಲೆಯಲ್ಲಿ ನೌಕರರು ಶ್ರಮವಹಿಸಿ ಕೆಲಸ ನಿರ್ವಹಣೆ ಮಾಡಿದ್ದಾರೆ.ಅನೇಕ ನೌಕರರು ಕೋರೋನಾ ದಿಂದ ತಮ್ಮ ಪ್ರಾಣ ಕಳೆದುಕೊಂಡದ್ದನ್ನು ಈ ಸಂದರ್ಭದಲ್ಲಿ ಸ್ಮರಿಸ ಬಹುದು.

ಹಾಗೂ ಅನೇಕ ನೌಕರರು ಕೋರೋನಾ ಸೋಂಕಿಗೆ ಒಳಗಾಗಿ ಚೇತರಿಸಿ ಕೊಂಡರೂ ಸಹ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತಿದ್ದಾರೆ.

ಕೋರೋನಾ 3ನೇ ಅಲೆಯು ಬರುವುದಕ್ಕಿಂತ ಮುಂಚಿತ ವಾಗಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಳ,ಆಕ್ಸಿಜನ್ ಶೇಖರಣೆ ವೈದಕೀಯ ಸೌಲಭ್ಯ ಹೆಚ್ಚಳ ಮಾಡುತ್ತಾ ಇದ್ದಾರೆ.

ಇದೇ ರೀತಿ ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಜಾರಿ ಮಾಡುವುದರ ಮೂಲಕ ಸರ್ಕಾರಿ ನೌಕರರ ಆತ್ಮಸೈರ್ಯವನ್ನು ಹೆಚ್ಚಿಸಬೇಕಾಗಿದೆ.

ಆದ್ದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಕರ್ನಾಟಕ ರಾಜ್ಯ ಘನ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿ ತಕ್ಷಣ ರಾಜ್ಯ ಸರ್ಕಾರಿ ನೌಕರರಿಗೆ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS)ಯನ್ನು ಮಂಜೂರು ಮಾಡಿಸಬೇಕೇಂದು ಕರ್ನಾಟಕ ರಾಜ್ಯ ಸಮಸ್ತ ಸರ್ಕಾರಿ ನೌಕರರು ಕೇಳಿಕೊಳ್ಳುತ್ತೇವೆ

ಇಂತಿ ತಮ್ಮ ಅಭಿಮಾನಿಗಳ ಬಳಗದ
ಬೂದನೂರು ಮಹೇಶ ಮಂಡ್ಯ
G.ರಂಗಸ್ವಾಮಿ ಮಧುಗಿರಿ
ಅರುಣ್ ಹುಡೇದ್ ಗೌಡ್ರು(ಶಿಗ್ಗಾವಿ. ಹಾವೇರಿ ಜಿಲ್ಲೆ)
ಮಹಾಂತ ಗೌಡ ಪಾಟೀಲ್
ಸಿದ್ದಲಿಂಗ ಮೂರ್ತಿ ತುಮಕೂರು
ಸತೀಶ್ ಚಿತ್ರದುರ್ಗ
ರಾಜಶೇಖರ ಗೌರಿಬಿದನೂರು
ಚೇತನ್ ಕುಮಾರ್ ರಾಮನಗರ
ಕೇಶವಮೂರ್ತಿ ಸಕಲೇಶಪುರ
ಸಿದ್ದೇಶ್ವರ ದಾವಣಗೆರೆ
ವಿರೂಪಾಕ್ಷಪ್ಪ ಬೀದರ್
ಹಾಗೂ ಸಮಸ್ತ ಅಭಿಮಾನಿಗಳ ಬಳಗ.


WhatsApp Group Join Now
Telegram Group Join Now
Suddi Sante Desk