ಬೆಂಗಳೂರು –
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ಮಾಡಿದರು ಹೌದು ಮುಂದೆ ಕಲಿಕಾ ಚೇತರಿಕೆ ಶೈಕ್ಷಣಿಕ ಕಾರ್ಯಕ್ರಮ ಕುರಿತು ಹಾಗೇ ಸಧ್ಯ ರಾಜ್ಯದಲ್ಲಿನ ಇಲಾಖೆಗೆ ದೊಡ್ಡ ಸಮಸ್ಯೆ ಯಾಗಿರುವ ಸಮವಸ್ತ್ರ ಕುರಿತು ಪ್ರಮುಖ ವಾಗಿ ಚರ್ಚೆ ಯನ್ನು ಮಾಡಲಾಯಿತು
ಕೋವಿಡ್-19 ಕಾರಣದಿಂದ ಪೂರ್ಣ ಪ್ರಮಾಣದ ಭೌತಿಕ ತರಗತಿಗಳಿಲ್ಲದೆ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಕಲಿಕಾ ಹಿನ್ನೆಡೆಯನ್ನು ಸರಿದೂಗಿಸಲು 2022-23ನೇ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಒಂದು ಪೂರ್ವಭಾವಿ ಸಭೆಯನ್ನು ಮಾಡಲಾಯಿತು.ಹಾಗೇ ಇನ್ನಿತರ ವಿಚಾರ ಗಳ ಕುರಿತು ಸಭೆಯಲ್ಲಿ ಸಚಿವರು ಚರ್ಚೆ ಯನ್ನು ಮಾಡಿದರು. ಈ ಒಂದು ಸಭೆಯಲ್ಲಿ ಸಚಿವ ರೊಂದಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು