ಆಟೊದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ₹ 2.57 ಲಕ್ಷ ಹಣವನ್ನು ಚಾಲಕ ಡಿ. ಮೋಹನ್ ಎಂಬುವರು ಪೊಲೀಸರ ಮೂಲಕ ವಾಪಸ್ ನೀಡಿದ್ದಾರೆ.ಹೌದು ಇಂತಹ ಪ್ರಾಮಾಣಿಕತೆ ಘಟನೆಗೆ ಸಾಕ್ಷಿಯಾಗಿದ್ದು ಬೆಂಗಳೂರು. ಆನಂದಪುರದ ನಿವಾಸಿ ಮೋಹನ್, ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಸಿರ್ಸಿ ವೃತ್ತದಲ್ಲಿ ಇಳಿಸಿದ್ದರು. ಅದೇ ವೇಳೆಯೇ ಪ್ರಯಾಣಿಕ, ಹಣವಿದ್ದ ಬ್ಯಾಗ್‌ನ್ನು ಆಟೊದಲ್ಲಿ ಬಿಟ್ಟು ಹೋಗಿದ್ದರು. ಬ್ಯಾಗ್ ನೋಡಿದ್ದ ಚಾಲಕ ಮೋಹನ್, ಪ್ರಯಾಣಿಕನಿಗಾಗಿ ಹುಡುಕಾಡಿದ್ದರು’ ಆದರೂ ಸಿಕ್ಕಿರಲಿಲ್ಲ.

ಕೊನೆಗೆ ಬ್ಯಾಗ್ ಸಮೇತ ಆಟೊ ಚಾಲಕ ಚಾಮರಾಜಪೇಟೆ ಠಾಣೆಗೆ ಆಗಮಿಸಿ ಮೋಹನ್, ಪೊಲೀಸರ ಬಳಿ ಘಟನೆ ಬಗ್ಗೆ ವಿವರಿಸಿದ್ದರು. ಬ್ಯಾಗ್ ವಾಪಸ್ ನೀಡಿ ಮಾನವೀಯತೆ ಮೆರೆದ ಮೋಹನ್ ಅವರನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ನೇತ್ರತ್ವದಲ್ಲಿ ಸಿಬ್ಬಂದಿ ಗಳು ಸನ್ಮಾನಿಸಿದ್ದಾರೆ.

ಇದೇ ವೇಳೆ ಮಾತನಾಡಿ ಇವರ ಕೆಲಸ ಇತರೆ ಚಾಲಕರಿಗೂ ಆದರ್ಶವಾಗಬೇಕು’ ಎಂದೂ ಅವರು ತಿಳಿಸಿದರು.