ಪ್ರಾಮಾಣಿಕತೆ ಮೆರೆದ ಸರ್ಕಾರಿ ಶಾಲಾ ಶಿಕ್ಷಕ – ರಾಜ್ಯದ ಸರ್ಕಾರಿ ಶಾಲೆಯ ಶಿಕ್ಷಕರ ಗೌರವ ಹೆಚ್ಚಿಸಿದ ಶ್ರೀನಿವಾಸ್ ದೇಸಾಯಿ ಕಾರ್ಯಕ್ಕೆ ಮೆಚ್ಚುಗೆ…..

Suddi Sante Desk
ಪ್ರಾಮಾಣಿಕತೆ ಮೆರೆದ ಸರ್ಕಾರಿ ಶಾಲಾ ಶಿಕ್ಷಕ – ರಾಜ್ಯದ ಸರ್ಕಾರಿ ಶಾಲೆಯ ಶಿಕ್ಷಕರ ಗೌರವ ಹೆಚ್ಚಿಸಿದ ಶ್ರೀನಿವಾಸ್ ದೇಸಾಯಿ ಕಾರ್ಯಕ್ಕೆ ಮೆಚ್ಚುಗೆ…..

ಕೊಪ್ಪಳ

ಸರ್ಕಾರಿ ಪ್ರಾಥಮಿಕ ಶಾಲೆ ಯ ಶಿಕ್ಷಕರೊಬ್ಬರು ಪ್ರಾಮಾಣಿಕ ಮೆರೆದ ಘಟನೆ ಕೊಪ್ಪಳ ದಲ್ಲಿ ನಡೆದಿದೆ ಹೌದು ತನ್ನದಲ್ಲದ ಹಣವನ್ನು ಹೋಟೆಲ್​ ಮಾಲಿಕನಿಗೆ ಮರಳಿಸುವ ಮೂಲಕ ​ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಶಿಕ್ಷಕ ಮಾದರಿಯಾಗಿದ್ದಾರೆ.

ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಬ್ಯಾಂಕ್​ಗೆ ಕಟ್ಟಲು ಅಂತ ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್​ನ್ನು ಹೋಟೆಲ್ ನಲ್ಲಿಟ್ಟಿದ್ದರು.

ಮುಂಜಾನೆ ಕುಷ್ಟಗಿ ಪಟ್ಟಣದ ನಿವಾಸಿಯಾಗಿ ರುವ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್ ದೇಸಾಯಿ, ಸೌದಾಗರ್ ಹೋಟೆಲ್​ಗೆ ಬಂದಿ ದ್ದರು.ಇಡ್ಲಿ, ವಡೆ, ದೋಸೆಯನ್ನು ಪಾರ್ಸಲ್ ಕೊಡಿ ಅಂತ ಹೇಳಿದ್ದರು.ಆದರೆ ಸೌದಾಗರ್ ಆಹಾರವಿದ್ದ ಕವರ್ ನೀಡುವ ಬದಲು ಹಣವಿದ್ದ ಕವರ್ ನೀಡಿ, ನಿಮ್ಮ ಪಾರ್ಸಲ್ ತೆಗೆದುಕೊಂಡು ಹೋಗಿ ಅಂತ ಹೇಳಿದ್ದರು.

ಹೀಗಾಗಿ ಶ್ರೀನಿವಾಸ ದೇಸಾಯಿ ಅವರು ಕವರ್​​ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಉಪಹಾರ ಸೇವಿಸ ಬೇಕು ಅಂತ ಕವರ್ ಬಿಚ್ಚಿ ನೋಡಿದರೆ ಇಡ್ಲಿ, ವಡೆ, ‌ದೋಸೆ ಬದಲಾಗಿ ಅದರಲ್ಲಿ ಹಣವಿತ್ತು.

ಹೋಟೆಲ್ ಮಾಲೀಕ ಅಚಾತುರ್ಯದಿಂದ ಹಣದ ಕವರ್ ನೀಡಿದ್ದಾನೆ ಅಂತ ತಿಳಿದ ಶಿಕ್ಷಕ ಶ್ರೀನಿವಾಸ್ ದೇಸಾಯಿ ಅವರು ಹೋಟೆಲ್ ಮಾಲೀಕನ ಬಳಿ ಹೋಗಿ ಹಣವಿದ್ದ ಕವರ್​​ ಅನ್ನು ಮರಳಿ ನೀಡಿದ್ದಾರೆ.ಹಣವನ್ನು ಹಿಂತಿರುಗಿಸಿ ಪ್ರಮಾಣಿಕತೆ ಮೆರದಿದ್ದಾರೆ.

ಶಿಕ್ಷಕನ ಪ್ರಮಾಣಿಕತೆಗೆ ಹೋಟೆಲ್ ಮಾಲೀಕ ಧನ್ಯವಾದಗಳನ್ನು ಹೇಳಿ ನಿಮ್ಮ ಪ್ರಮಾಣಿಕತೆ ಹಲವರಿಗೆ ಮಾದರಿಯಾಗಿದೆ ಅಂತ ಅಭಿನಂದಿಸಿ ದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.