ಬೆಂಗಳೂರು –
ಆಗಸ್ಟ್ 23 ರಿಂದ ರಾಜ್ಯದಲ್ಲಿ 9 ರಿಂದ ಶಾಲಾ ಕಾಲೇಜುಗಳು ಆರಂಭವಾಗಲಿದ್ದು ಇದರ ಬೆನ್ನಲ್ಲೇ ಸಧ್ಯ ಪೂರ್ವ ಹಂತದಲ್ಲಿ ರಾಜ್ಯದಲ್ಲಿ ನಾಳೆಯಿಂದ ಮಹತ್ವದ ಪರೀಕ್ಷೆಯನ್ನು ಮಾಡಲು ನಿರ್ಧಾರವನ್ನು ತಗೆದುಕೊಳ್ಳಲಾಗಿದೆ.ಹೌದು ಒಂದು ಕಡೆ ಶಾಲೆಗಳು ಆರಂಭವಾಗುತ್ತಿದ್ದು ಮತ್ತೊಂದು ಕಡೆಗೆ ಮೂರ ನೇಯ ಅಲೆಯ ಆತಂಕ ಹೀಗಾಗಿ ಇದನ್ನೇಲ್ಲವನ್ನು ಅರಿತ ಮುಖ್ಯಮಂತ್ರಿ ಯವರು ಈಗಾಗಲೇ ರಾಜ್ಯ ದಲ್ಲಿ ಒಂದು ಹಂತದಲ್ಲಿ ಎಲ್ಲಾ ಮಕ್ಕಳಿಗೆ ಕರೋನಾ ಪರೀಕ್ಷೆ ಮಾಡುವಂತೆ ಹೇಳಿದ್ದರು ಹೀಗಾಗಿ ಇದನ್ನೇ ಲ್ಲವನ್ನು ಅರಿತ ಆರೋಗ್ಯ ಇಲಾಖೆ ರಾಜ್ಯ ಸರ್ಕಾರ ದ ಸೂಚನೆಯಂತೆ ಕೊರೊನಾ ಮೂರನೆ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರದಂತೆ ಈಗಾಗಲೇ ಆರೋಗ್ಯ ಇಲಾಖೆ ಕಟ್ಟೆಚ್ಚರವನ್ನು ವಹಿಸಿದ್ದು 18 ವರ್ಷ ಮೇಲ್ಪಟ್ಟವರೂ ಈಗಾಗಲೇ ಲಸಿಕೆ ಪಡೆದುಕೊಳ್ಳುತ್ತಿರುವುದರಿಂದ ನಾಳೆಯಿಂದ 18 ವರ್ಷದೊಳಗಿನವರಿಗೆ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಿನಿತ್ಯ ನಡೆಸುವ ಕೊರೊನಾ ಪರೀಕ್ಷೆಯಲ್ಲಿ ಶೇ.10 ರಷ್ಟು 18 ವರ್ಷದೊಳಗಿನವರಿಗೆ ಕಡ್ಡಾ ಯವಾಗಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ.ರಾಜ್ಯದಲ್ಲಿ ಪ್ರತಿನಿತ್ಯ ಸರಿ ಸುಮಾರು ಒಂದೂವರೆ ಲಕ್ಷ ಕೊರೊನಾ ಪರೀಕ್ಷೆ ನಡೆಸಲಾಗು ತ್ತಿದೆ. ಇದರಲ್ಲಿ ಕನಿಷ್ಟ ಪಕ್ಷ ದಿನನಿತ್ಯ 15 ಸಾವಿರಕ್ಕೂ ಹೆಚ್ಚು ಮಕ್ಕಳ ಪರೀಕ್ಷೆ ನಡೆಸಲು ಸೂಚಿಸಲಾಗಿದೆ.
ಮೂರನೇ ಅಲೆ ಸೆಪ್ಟೆಂಬರ್ ತಿಂಗಳಿನಲ್ಲಿ ಅಪ್ಪಳಿ ಸುವ ಸಾಧ್ಯತೆ ಇದೆ ಎಂಬ ತಜ್ಞರ ಸಲಹೆ ಮೇರೆಗೆ ಆಗಷ್ಟ್ ತೀಂಗಳಿನೊಳಗೆ ಗರಿಷ್ಠ ಕೊರೊನಾ ತಪಾಸಣೆ ನಡೆಸಬೇಕಾದ ಅನಿವಾರ್ಯತೆ ಎದುರಾ ಗಿದೆ.ಹೀಗಾಗಿ ಕೊರೊನಾ ತಪಾಸಣೆ ಕಾರ್ಯವನ್ನು ರಾಜ್ಯದಾದ್ಯಂತ ತೀವ್ರಗೊಳಿಸಲಾಗಿದ್ದು ಈ ತಿಂಗಳಿ ನೊಳಗೆ ಸುಮಾರು 45 ಲಕ್ಷ ಮಂದಿಯ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ.ಪರೀಕ್ಷೆ ಸಂದರ್ಭದಲ್ಲಿ 18 ವರ್ಷದೊಳಗಿನ ಮಕ್ಕಳ ಪರೀಕ್ಷೆಗೆ ಆದ್ಯತೆ ನೀಡಲಾಗುತ್ತಿದ್ದು ಶಾಲಾ ಆರಂಭದ ಬೆನ್ನಲ್ಲೇ ರಾಜ್ಯ ದಲ್ಲಿ ಈ ಒಂದು ಕಾರ್ಯದಿಂದ ಮಕ್ಕಳಲ್ಲಿನ ಕರೋನಾ ತಡೆಗಟ್ಟುವಿಕೆಯನ್ನು ತಡೆಹಿಡಿಯಬಹು ದಾಗಿದ್ದು ಮೆಚ್ಚುವಂತಹ ಕಾರ್ಯವಾಗಿದೆ.