ಬೆಂಗಳೂರು –
ನಾಳೆ ಕ್ಲಬ್ ಹೌಸ್ ಮೀಟಿಂಗ್ ದಲ್ಲಿ ಓಟಿಎಸ್ ಶಿಕ್ಷಕರ ಮುಂದಿನ ಹೋರಾಟದ ನಿರ್ಧಾರ
ನಾಳೆ ಸಂಜೆ 7-30 ಕ್ಕೆ ನಡೆಯುವ ಕ್ಲಬ್ ಹೌಸ್ ಮೀಟಿಂಗ್ ದಲ್ಲಿ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿ ಸ್ವಂತ ಜಿಲ್ಲೆಗೆ ವರ್ಗಾವಣೆ ಹೋರಾಟದ ಬಗ್ಗೆ ರೂಪು ರೇಷೆಗಳನ್ನು ಸಿದ್ಧತೆ ಮಾಡಿಕೊ ಳ್ಳಲು ಸಭೆ ಕರೆಯಲಾಗಿದೆ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಪ್ರೀಡಂ ಪಾರ್ಕ್ ಹೋರಾಟ ಕೈಗೊಂಡಿದ್ದು ಸಾಕಷ್ಟು ಶಾಸಕರು ಗಳಿಂದ ಹಾಗೂ ಸಚಿವ ರಿಂದ ಸರ್ಕಾರಕ್ಕೆ ಪತ್ರಗಳನ್ನು ಹಾಕಲಾಗಿದೆ ಹಾಗೂ ಪತ್ರ ಚಳುವಳಿ ಸಹ ಮಾಡಲಾಗಿದೆ ನಾಳಿನ ಸಭೆಯಲ್ಲಿ ಮಠಾಧೀಶರಿಗೆ ನಿಯೋಗದ ಮುಖಾಂತರ ಮನವಿ ನೀಡು ವುದು ಹಾಗೂ ಮುಂದಿನ ಹೋರಾಟದ ಅಮರಣಾಂತ ಉಪವಾಸ ಸತ್ಯಾಗ್ರ ಚಳುವಳಿ ದಿನಾಂಕ ನಿಗದಿ ಮಾಡು ವುದರ ಬಗ್ಗೆ ರಾಜ್ಯದ ಎಲ್ಲ ಶಿಕ್ಷಕರಿಗೆ ಸಲಹೆ ಅಭಿಪ್ರಾ ಯವನ್ನು ಸಂಗ್ರಹಿಸಿ ನಾಳಿನ ಸಭೆಯಲ್ಲಿ ಚರ್ಚಿಸಲಾಗು ವುದು ಎಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಹಾಗೂ ಮಹೇಶ್ ಮಡ್ಡಿ ಶಿಕ್ಷಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ