ಹುಬ್ಬಳ್ಳಿ –
ಆದಾಯ ಕ್ರೋಡಿಕರಣಕ್ಕಾಗಿ ಪಾಲಿಕೆಯಲ್ಲಿ ನಡೆಯಿತು ಮಹತ್ವದ ಸಭೆ – ಪಾಲಿಕೆಯ ಸರ್ವ ಸದಸ್ಯರು,ಆಯುಕ್ತರು,ಮೇಯರ್,ಉಪಮೇಯರ್ ರೊಂದಿಗೆ ಸಭೆ ಮಾಡಿದ ಶಾಸಕರು…..
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾ ನಗರ ಪಾಲಿಕೆ ಎಂದೇ ಕರೆಯಲ್ಪಡುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಆದಾಯ ಹೆಚ್ಚಿಸುವ ಕುರಿತಂತೆ ಮಹತ್ವದ ಸಭೆಯೊಂದು ನಡೆಯಿತು.ಹೌದು ಹುಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಗೆ ವಿವಿಧ ಮೂಲಗಳ ಆದಾಯ ಕ್ರೂಢೀಕರಣ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕರು ವಿರೋಧ ಪಕ್ಷದ ಉಪ ನಾಯಕರಾದ ಅರವಿಂದ.ಬೆಲ್ಲದ ಹಾಗೂ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಶಾಸಕರಾದ ಮಹೇಶ.ಟೆಂಗಿನಕಾಯಿ ಅವರ ಅಧ್ಯಕ್ಷತೆಯಲ್ಲಿ ಈ ಒಂದು ಸಭೆ ನಡೆಯಿತು.
ಹುಬ್ಬಳ್ಳಿಯ ಪಾಲಿಕೆಯ ಆಯುಕ್ತರ ಕಚೇರಿಯ ಸಭಾಭವನದಲ್ಲಿ ಈ ಒಂದು ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆದಾಯದ ಕ್ರೋಢಿಕರಣ ಕುರಿತು ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವಳಿ ನಗರದ ಅಭಿವೃದ್ಧಿ ಹಾಗೂ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ
ತೆರಿಗೆ, ಬಾಡಿಗೆ ಹಾಗೂ ಇತರ ಮೂಲಗಳ ಪ್ರಕಾರ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ಕುರಿತಂತೆ ಸುಧೀರ್ಘವಾಗಿ ಚರ್ಚೆಯನ್ನು ಮಾಡಲಾಯಿತು.
ಇದೇ ವೇಳೆ ಅಧಿಕಾರಿಗಳಿಗೆ ಕೆಲವೊಂದಿಷ್ಟು ಸಲಹೆ ಸೂಚನೆಯನ್ನು ನೀಡಿ ಸೂಚನೆಯನ್ನು ಶಾಸಕರು ನೀಡಿದರು.ಈ ಸಂದರ್ಭದಲ್ಲಿ ಶಾಸಕರು,ಮಹಾಪೌರರಾದ ರಾಮಣ್ಣ ಬಡಿಗೇರ, ಉಪಮಹಾಪೌರಾದ ಶ್ರೀಮತಿ ದುರ್ಗಮ್ಮ ಶಶಿಕಾಂತ ಬಿಜವಾಡ, ಸಭಾ ನಾಯಕರಾದ ವೀರಣ್ಣ ಸವಡಿ,
ವಿರೋಧ ಪಕ್ಷದ ನಾಯಕರಾದ ರಾಜಶೇಖರ ಕಮತಿ, ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಹಾಗೂ ಮಹಾನಗರ ಪಾಲಿಕೆಯ ಸರ್ವ ಸದಸ್ಯರು ಮತ್ತು ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ …..