This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಕೇಂದ್ರ ಮಾದರಿಯ ವೇತನ ಸಮಿತಿ ರಚನೆ ಕುರಿತು ನಡೆಯಿತು ಸಭೆ ಸಭೆಯಲ್ಲಿ ಚರ್ಚೆಯಾಗಿ ದ್ದೇನು ಗೊತ್ತಾ ಮುಖ್ಯಮಂತ್ರಿ ನೇತ್ರತ್ವದಲ್ಲಿ ನಡೆಯಿತು ಮಹತ್ವದ ಸಭೆ ಸಮಿತಿ ರಚನೆ ಕುರಿತಂತೆ ಮಹತ್ವದ ಚರ್ಚೆ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ಆಯೋಗ ನೀಡುವ ಕುರಿತಂತೆ ಅಕ್ಟೋಬರ್ ನಲ್ಲಿ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಈಗಾ ಗಲೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಕುರಿತಂತೆ ಮುಖ್ಯಮಂತ್ರಿ ಹೇಳಿದ ಬೆನ್ನಲ್ಲೇ ಈ ಒಂದು ಸಮಿತಿ ರಚನೆ ಮತ್ತು ಜಾರಿಗೆ ತರುವ ಕುರಿತಂತೆ ಚಟುವಟಿಕೆಗಳು ಚುರುಕುಗೊಂಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಒಂದು ವಿಚಾರ ಕುರಿತಂತೆ ಸಭೆ ಮಾಡಿದರು.

ಗೃಹ ಕಚೇರಿ ಕೃಷ್ಣಾ ದಲ್ಲಿ ಈ ಒಂದು ಕುರಿತು ಸಭೆಯು ನಡೆಯಿತು.ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಈ ಒಂದು ಮಹತ್ವದ ಸಭೆ ನಡೆಯಿತು ಹೌದು ಬೆಂಗಳೂರಿನಲ್ಲಿ ಈ ಕುರಿತಂತೆ ಸೆಪ್ಟಂಬರ್ 6 ರಂದು ನಡೆದ ರಾಜ್ಯದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ನೀಡುವ ಕಾರ್ಯಕ್ರಮ ದಲ್ಲಿ ಮಾತನಾಡಿ ಸಮಿತಿ ರಚನೆ ಕುರಿತಂತೆ ಘೋಷಣೆ ಮಾಡಿದ್ದರು.

ಹೀಗಾಗಿ ಮುಂದಿನ ತಿಂಗಳು ಸಮಿತಿ ರಚನೆ ಮಾಡಬೇಕಾ ಗುತ್ತದೆ ಎಂಬ ಒಂದು ಕಾರಣಕ್ಕಾಗಿ ಮತ್ತು ಈ ಒಂದು ಹಿನ್ನಲೆಯಲ್ಲಿ ಸಮಿತಿಯಲ್ಲಿ ಯಾರು ಯಾರು ಇರಬೇಕು ಯಾರ ನೇತ್ರತ್ವದಲ್ಲಿ ಸಮಿತಿ ರಚನೆಯಾಗಬೇಕು ಈ ಎಲ್ಲಾ ವಿಚಾರಗಳ ಕುರಿತಂತೆ ಸಮಿತಿಗೆ ಅಂತಿಮ ರೂಪರೇಷೆ ಯನ್ನು ನೀಡುವ ಉದ್ದೇಶದಿಂದ ಚರ್ಚೆಯನ್ನು ಮಾಡಲು ಉನ್ನತ ಮಟ್ಟದಲ್ಲಿ ಅಧಿಕಾರಿಗಳ ಮತ್ತು ಒಂದಿಬ್ಬರು ಸಚಿವರ ನೇತ್ರತ್ವದಲ್ಲಿ ಸಭೆಯನ್ನು ಮುಖ್ಯಮಂತ್ರಿ ಸಚಿವರು ಸಭೆ ನಡೆಸಿದರು.

ಬೆಂಗಳೂರಿನಲ್ಲಿ ನಡೆದ ಈ ಒಂದು ಸಭೆಯಲ್ಲಿ ಪ್ರಮುಖ ವಾಗಿ ಸಮಿತಿಯ ರೂಪರೇಷೆ ಮತ್ತು ವರದಿ ನೀಡುವ ಮತ್ತು ಕಾರ್ಯವ್ಯಾಪ್ತಿಯ ಕುರಿತಂತೆ ಮೊದಲು ಚರ್ಚೆ ಯನ್ನು ಮಾಡಲಾಯಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡು ಗಂಟೆಗಳ ಈ ಒಂದು ಮಹತ್ವದ ಸಭೆಯಲ್ಲಿ ಮುಖ್ಯವಾಗಿ ಈ ಒಂದು ಸಭೆಯಲ್ಲಿ ಸಮಿತಿಗೆ ಅಧ್ಯಕ್ಷರ ಪ್ರಧಾನ ಕಾರ್ಯದರ್ಶಿ ಮತ್ತು ಸದಸ್ಯರ ನೇಮಕ ಕುರಿತಂತೆ ಮತ್ತು ವರದಿ ನೀಡುವ ಕುರಿತಂತೆ ಚರ್ಚೆಯನ್ನು ಮಾಡಲಾಯಿತು ಬೆಂಗಳೂರು ಮಹಾನಗರ ಪಾಲಿಕೆ,ಜಿಲ್ಲಾ ತಾಲ್ಲೂಕು ಮತ್ತು ಇವುಗಳ ನಂತರ ರಾಜ್ಯದಲ್ಲಿ ಸಾಮೂಹಿಕ ವಿಧಾನ ಸಭಾ ಚುನಾವಣೆ ಹೀಗೆ ಒಂದರ ಮೇಲೆ ಎಂಬಂತೆ ನಾಲ್ಕೈದು ಚುನಾವಣೆಗಳು ಬರಲಿದ್ದು ಹೀಗಾಗಿ ವಿನಾಕಾ ರಣ ವಿಳಂಬವಾಗದೇ ಕೂಡಲೇ ಸಮಿತಿ ರಚನೆ ಮಾಡಿ ವರದಿ ನೀಡುವಂತೆ ಸೂಚನೆಯನ್ನು ನೀಡಲಾಯಿತು

ಈಗಾಗಲೇ ತುಂಬಾ ವಿಳಂಬವಾಗಿದ್ದು ಹೀಗಾಗಿ ಸಮಿತಿ ರಚನೆ ಘೋಷಣೆ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಕಾರ್ಯಪ್ರವೃತ್ತರಾಗಿ ಸಧ್ಯ ಸಮಿತಿ ರಚನೆ ಕುರಿತಂತೆ ಸಧ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಅನುಮಾನಗೊಂಡಿದ್ದ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿಯವರು ಈ ಒಂದುಮತ್ತೊಂದು ಹಂತದ ಸಭೆ ಹೊಸ ಭರವಸೆಯೊಂದಿಗೆ ಆಶಾಕಿರಣವ ನ್ನುಂಟು ಮಾಡಿದ್ದು ಸಮಿತಿ ಯಾರ ನೇತ್ರತ್ವದಲ್ಲಿ ರಚನೆ ಯಾಗುತ್ತದೆ ಯಾರು ಯಾರು ಸದಸ್ಯರಾಗುತ್ತಾರೆ ಎಂಬ ಕುರಿತಂತೆ ಸಭೆಯಲ್ಲಿ ಸಾಕಷ್ಟು ಸಲಹೆ ಸೂಚನೆ ಮಾತು ಗಳು ಕೇಳಿ ಬಂದಿದ್ದು ಹೀಗಾಗಿ ಮುಖ್ಯಮಂತ್ರಿ ಈ ಒಂದು ಸಮಿತಿಯನ್ನು ಯಾರ ಹೆಗಲಿಗೆ ಕಟ್ಟುತ್ತಾರೆ ಎಂಬ ಕುರಿ ತಂತೆ ಕಾದು ನೋಡಬೇಕಿದೆ.


Google News

 

 

WhatsApp Group Join Now
Telegram Group Join Now
Suddi Sante Desk