ಬೆಂಗಳೂರು –
ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ರಾಜ್ಯಗಳ ಮುಖ್ಯಮಂತ್ರಿ ಗಳೊಂದಿಗೆ ಸಭೆಯನ್ನು ಮಾಡಿದರು. ನವದೆಹಲಿ ಯಲ್ಲಿ ಅಮಿತ್ ಶಾ ನೇತ್ರತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರೊಂದಿಗೆ ಸಭೆಯನ್ನು ಮಾಡಿದರು.
ಎರಡು ಗಂಟೆಗಳ ಕಾಲ ನಡೆದ ಈ ಒಂದು ಸಭೆ ಯಲ್ಲಿ ಎರಡು ರಾಜ್ಯಗಳ ನಡುವಿನ ಮಧ್ಯದ ಗಡಿ ವಿವಾದದ ಕುರಿತಂತೆ ಚರ್ಚೆಯನ್ನು ಮಾಡಲಾ ಯಿತು.ಸಭೆಯಲ್ಲಿ ಎರಡು ರಾಜ್ಯಗಳ ಮುಖ್ಯ ಮಂತ್ರಿಗಳಿಗೆ ಅಮಿತ್ ಶಾ ಅವರು ಖಡಕ್ ಸಂದೇಶವನ್ನು ನೀಡಿ ಕಳಿಸಿದರು.
ಸಧ್ಯ ಈ ಒಂದು ವಿಚಾರವು ಸರ್ವೋಚ್ಚ ನ್ಯಾಯಾಲಯದಲ್ಲಿದ್ದು ಹೀಗಾಗಿ ಯಾವುದೇ ಕಾರಣಕ್ಕೂ ವಿನಾಕಾರಣ ಸಾಮರಸ್ಯವನ್ನು ಕಡದುವ ಕೆಲಸವನ್ನು ಮಾಡಬೇಡಿ ಹಾಗೇ ಜನರ ನಡುವೆ ಒಳ್ಳೇಯ ಸಂದೇಶದೊಂದಿಗೆ ಉತ್ತಮ ವಾದ ವಾತಾವರಣವನ್ನು ನಿರ್ಮಾಣ ಮಾಡಿ ಎನ್ನುತ್ತಾ ಈ ಕುರಿತಂತೆ ಕೇಂದ್ರ ಸರ್ಕಾರವು ಸೂಕ್ತವಾದ ನಿರ್ಧಾರ ನಿರ್ಣಯವನ್ನು ತಗೆದು ಕೊಳ್ಳುತ್ತದೆ ನೀವು ಜನರ ನಡುವೆ ಒಳ್ಳೇಯ ವಾತಾರವಣವನ್ನು ನಿರ್ಮಾಣ ಮಾಡಿ ಎಂದು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಭೆಯ ನಂತರ ಮಾತನಾಡಿದ ಅವರು ಸಭೆಯ ಮಾಹಿತಿಯನ್ನು ಹಂಚಿಕೊಂಡರು.ಸಂಸದ್ ಭವನದಲ್ಲಿ ನಡೆದ ಈ ಒಂದು ಸಭೆಯಲ್ಲಿ ರಾಜ್ಯದಿಂದ ಗೃಹ ಸಚಿವ ಅರಗ ಜ್ಞಾನೇಂದ್ರ ,ಸಚಿವ ಗೋವಿಂದ ಕಾರಜೋಳ,ಇನ್ನೂ ಅತ್ತ ಮಹಾರಾಷ್ಟ್ರದಿಂದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರೊಂದಿಗೆ ಉಪ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..