ಬೆಂಗಳೂರು –
ಹೆಚ್ಚುವರಿ ಪ್ರಕ್ರಿಯೆ ಯಲ್ಲಿ ಆಗುತ್ತಿರುವ ಗೊಂದಲ ಹಾಗೂ ಶಿಕ್ಷಕರು ಬಹಳ ಆತಂಕ ಪಡುತ್ತಿದ್ದು,ಸಾಕಷ್ಟು ಫೋನ್ ಕರೆಗಳ ಮೂಲಕ ಒತ್ತಡ ಹಾಕುತ್ತಿದ್ದೀರಿ.ಈ ಸಂದರ್ಭದಲ್ಲಿ ಶಿಕ್ಷಣ ಸಚಿವರು ಹಾಗೂ ಅವರ ವಿಶೇಷಾಧಿಕಾರಿಗಳು ಆಪ್ತ ಕಾರ್ಯದರ್ಶಿಗಳ ಜೊತೆಗೆ ಚರ್ಚಿಸಲಾಗು ತ್ತಿದೆ.ಈ ಸಂಬಂಧಿಸಿದಂತೆ ಇಂದು ಸ್ಪಷ್ಟವಾದ ವೇಳಾಪಟ್ಟಿ & ನಿರ್ದೇಶನ ಬರುವ ಸಾಧ್ಯತೆ ಇರುತ್ತದೆ.ಸಂಬಂಧಿಸಿದಂತೆ ವಿಸ್ತೃತವಾದ ಚರ್ಚೆ ಮಾಡಲಾಗಿದೆ.
ಈಗಾಗಲೇ ಹೆಚ್ಚುವರಿಯಲ್ಲಿ ನಮಗೆ ಆಗ ಬೇಕಾದ ಅನೂಕೂಲಗಳ ಕುರಿತು ಆಯುಕ್ತರಿಗೆ ನಿರ್ದೇಶಕ ರಿಗೆ ವಿನಂತಿ ಕೂಡ ಮಾಡಲಾಗಿದೆ. ಬಡ್ತಿ ಪ್ರಕ್ರಿಯೆ ಮಾಡಿ,ಹೆಚ್ಚುವರಿ ಪ್ರಕ್ರಿಯೆ ಆರಂಭಿಸಲು ವಿನಂತಿ ಮಾಡಲಾಗಿತ್ತು ವಿನಂತಿ ಯನ್ನು ಕೂಡ ಇಲಾಖೆ ಒಪ್ಪಿಕೊಂಡಿತ್ತು ಆದರೆ SC/ST ನೌಕರರಿಗೆ ಸಂಬಂದಿಸಿದ ರಿಜರ್ವೇಶನ್ ಪುನರ್ ಹೊಂದಾಣಿಕೆ ಮಾಡುವ ಪ್ರಕ್ರಿಯೆ ಎಲ್ಲಾ ಇಲಾಖೆಗಳಲ್ಲಿ ನಡೆದಿದ್ದು,ಅಲ್ಲಿಯವರೆಗೆ ಬಡ್ತಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದು ತಮಗೆಲ್ಲ ಗೊತ್ತಿರುವ ವಿಷಯವಾಗಿದೆ.
ಯಾವುದೇ ಕಾರಣಕ್ಕೂ ಒಂದು ಶಾಲೆಯಲ್ಲಿ ವಿಷಯವಾರು,ವೃಂದವಾರು ಶಿಕ್ಷಕರನ್ನು ಗುರುತಿಸಿ,ಹೆಚ್ಚುವರಿ ಮಾಡುವ ಪ್ರಕ್ರಿಯೆ ಯನ್ನು ಸ್ಪಷ್ಟವಾಗಿ ವಿರೋಧಿಸಲಾಗಿದ್ದು ಮಂಜೂರಾದ ಹುದ್ದೆಗಳು & ಕಾರ್ಯನಿರ್ವಹಿಸುತ್ತಿರುವ ಹುದ್ದೆ ಗಳನ್ನು ಪರಿಗಣಿಸಿ ಮಕ್ಕಳ ಸಂಖ್ಯೆ ಅನುಗುಣ ವಾಗಿ ಮಂಜೂರಾದ ಹುದ್ದೆಗಳಿಗಿಂತ, ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹೆಚ್ಚಾಗಿದ್ದರೆ ಮಾತ್ರ ಹೆಚ್ಚುವರಿ ಶಿಕ್ಷಕರು ಎಂದು ಗುರುತಿಸಲು ವಿನಂತಿಸಿಕೊಂಡಿರುತ್ತೆವೆ.
ಕಾರಣ ಯಾವುದೇ ಶಿಕ್ಷಕರು ಆತಂಕ ಪಡುವ ಅಗತ್ಯವಿಲ್ಲ ಹಾಗೂ ಈ ಕುರಿತು ಇಂದು ಸಮಗ್ರ ವೇಳಾಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತೇವೆ.
ತಮ್ಮ ಶಂಭುಲಿಂಗನಗೌಡ ಪಾಟೀಲ ರಾಜ್ಯಾಧ್ಯಕ್ಷರು. ಚಂದ್ರಶೇಖರ ನುಗ್ಗಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..