ಬೆಂಗಳೂರು –
ಆತ್ಮೀಯ ಶಿಕ್ಷಕ ಬಂಧುಗಳೇ…..
ತಮ್ಮ ಕಷ್ಟ ನೋವು ವೇದನೆ ನಮಗೆ ಅರ್ಥ ವಾಗಿದೆ …..ತಾವುಗಳು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ.ಈಗಾಗಲೇ ಸರ್ಕಾರ ದಿಂದ ಸಲ್ಲಿಸಿರುವ ಪ್ರಸ್ತಾವನೆಯ ಸಂದರ್ಭದಲ್ಲಿ ಚುನಾವಣೆ ಘೋಷಣೆ ಆಗಿರುವುದರಿಂದ ಚುನಾವಣಾ ಆಯೋಗದ ಕಚೇರಿ ತುಂಬಾ ಕರ್ತವ್ಯ ನಿರತವಾಗಿರುತ್ತದೆ.
ಸರ್ಕಾರದ ಕಾರ್ಯದರ್ಶಿಗಳು ಶಿಕ್ಷಣ ಇಲಾಖೆ ರಿತೇಶ್ ಕುಮಾರ್ ಸಿಂಗ್ ಅವರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ.ಅವರು ಸಹ ಚುನಾವಣಾ ಆಯೋಗಕ್ಕೆ ವಿನಂತಿಸಿದ್ದಾರೆ
ಚುನಾವಣಾ ಆಯೋಗವು ಹಳೆಯ ಪ್ರಸ್ತಾವನೆ ಯನ್ನು ಪರಿಗಣಿಸಬೇಕೆ ಅಥವಾ ಸರಕಾರದ ಮುಖ್ಯ ಕಾರ್ಯದರ್ಶಿ ಅವರ ಸ್ಕ್ರೀನಿಂಗ್ ಕಮಿಟಿ ಮೂಲಕ ಬಂದ ನಂತರ ಪರಿಗಣಿಸಬೇಕೇ ಎಂಬ ಗೊಂದಲದಲ್ಲಿದೆ.
ಈ ಗೊಂದಲಕ್ಕೆ ಇಂದು ಪರಿಹಾರ ಸಿಗುವ ಸಾಧ್ಯತೆ ಇದೆತದನಂತರ ಒಂದು ವೇಳೆ ಸ್ಕ್ರೀನಿಂಗ್ ಕಮಿಟಿ ಅನುಮೋದನೆ ಬೇಕಾದಲ್ಲಿ ನಮ್ಮ ಸಂಘದ ಕಾರ್ಯದರ್ಶಿ ಅವರು ಅಲ್ಲಿಯೇ ರಾಜ್ಯಚುನಾವಣಾ ಕಚೇರಿಯಲ್ಲಿ ಉಪಸ್ಥಿತರಿ ದ್ದಾರೆ.ಆ ಪ್ರಸ್ತಾವನೆಯನ್ನು ಪಡೆದು ಸರ್ಕಾರದ ಶಿಕ್ಷಣ ಇಲಾಖೆ ಮೂಲಕ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿ ಅಲ್ಲಿಂದ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಹೋಗಬೇಕಾಗುತ್ತದೆ.
ಇದಕ್ಕೆ ಒಂದೆರಡು ಮೂರು ದಿನಗಳ ಕಾಲಾ ವಕಾಶ ಬೇಕಾಗುತ್ತದೆ.ಇವೆಲ್ಲವನ್ನೂ ರಾಜ್ಯ ಸರ್ಕಾರಿ ನೌಕರರ ಸಂಘ ಅಪ್ಡೇಟ್ ನಲ್ಲಿ ಇದೆ. ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗಿದೆ.
ತಮಗೆ ಒಂದು ಹೇಳಲಿಕ್ಕೆ ಸ್ಪಷ್ಟಪಡಿಸುತ್ತೇನೆ ವರ್ಗಾವಣೆ ನೂರಕ್ಕೆ ನೂರು ಆಗುತ್ತದೆ.ಈ ಪ್ರಕ್ರಿಯೆಗಳಿಗಾಗಿ ಒಂದಿಷ್ಟು ಸಮಯಾವಕಾಶ ಬೇಕು ಅಷ್ಟೇ. ಸಿಎಸ್ ಷಡಕ್ಷರಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಬೆಂಗಳೂರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..