ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ಮಹತ್ವದ ಸಂದೇಶ – ಎಲ್ಲಾ ಅಧಿಕಾರಿಗಳಿಗೆ ನೌಕರರಿಗೆ ನಾಡದೊರೆ ನೀಡಿದ ಸೂಚನೆ ಏನು ಗೊತ್ತಾ…..

Suddi Sante Desk
ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ಮಹತ್ವದ ಸಂದೇಶ – ಎಲ್ಲಾ ಅಧಿಕಾರಿಗಳಿಗೆ ನೌಕರರಿಗೆ ನಾಡದೊರೆ ನೀಡಿದ ಸೂಚನೆ ಏನು ಗೊತ್ತಾ…..

ಬೆಂಗಳೂರು

ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ಮಹತ್ವದ ಸಂದೇಶ – ಎಲ್ಲಾ ಅಧಿಕಾರಿಗಳಿಗೆ ನೌಕರರಿಗೆ ನಾಡದೊರೆ ನೀಡಿದ ಸೂಚನೆ ಏನು ಗೊತ್ತಾ…..

ಮಧ್ಯವರ್ತಿಗಳನ್ನು ಕಚೇರಿಗೆ ಸೇರಿಸದೇ ಜನರ ಸೇವೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾ ಮಯ್ಯ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸೂಚನೆಯನ್ನು ನೀಡಿದ್ದಾರೆ. ಬೆಂಗ ಳೂರಿನಲ್ಲಿ ಮಾತನಾಡಿದ ಅವರು ಯಾವುದೇ ಸಮಸ್ಯೆಗಳನ್ನು ತಗೆದುಕೊಂಡು ಕಚೇರಿಗೆ ಬರುವವರ ಕಣ್ಣೀರು ಒರೆಸುವುದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ

ಮಾಸಲು ಬಟ್ಟೆಯಲ್ಲಿ ಬರುವ ಬಡವರ ಕಣ್ಣೀರು ಒರೆಸಿ ಎಂದಿದ್ದಾರೆ.ಕೆಎಎಸ್ ಸಂಘದ ಸಭಾಂಗ ಣದಲ್ಲಿ ಆಯೋಜಿಸಿದ್ದ ಕರ್ನಾಟಕ ಆಡಳಿತಾ ಸೇವಾ ಅಧಿಕಾರಿಗಳ ಸಂಘದ ದಿನಚರಿ ಮತ್ತು ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತ ನಾಡಿದ ಅವರು ಸವೆದ ಚಪ್ಪಲಿ,ಹರಕಲು ಚಡ್ಡಿ,

ಮಾಸಿದ ಬಟ್ಟೆ, ಅವಿದ್ಯಾವಂತರ ಪರವಾಗಿ ನಿಮ್ಮಗಳ ಹೃದಯ ಮಿಡಿಯಬೇಕೆಂದು ಕರೆ ನೀಡಿದರು.ಈ ಜವಾಬ್ದಾರಿಯನ್ನು ನಿರ್ವಹಿಸಿ, ಮಧ್ಯವರ್ತಿಗಳನ್ನು ನಿಮ್ಮ ಕಚೇರಿ ಬಳಿ ಸೇರಿಸದೆ ಜನರ ಸೇವೆ ಮಾಡಿ ಎಂದರು.ಇನ್ನೂ ರಾಜಕಾರ. ಣಗಳಿಗೆ,ಅಧಿಕಾರಿಗಳಿಗೆ ಜನರು ಸವಲತ್ತುಗ ಳನ್ನು ಒದಗಿಸಿದ್ದಾರೆ.

ಜನರ ತೆರಿಗೆ ಹಣದಲ್ಲಿ ನಮಗೆ ಸವಲತ್ತುಗಳು ಸಿಕ್ಕಿವೆ.ಸುಗಮ ಜನಪರ ಆಡಳಿತ ಕೊಡಲಿ ಎನ್ನುವ ಕಾರಣದಿಂದ ಜನರಿಂದ ನಮಗೆ ಸವಲತ್ತು ಸಿಕ್ಕಿವೆ.ಜನರ ಅಭ್ಯುದಯ ನಮ್ಮ ಗುರಿ ಆಗಬೇಕು ಎಂದರು.ಬಲಾಡ್ಯರು ದುರ್ಬಲರ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ವಹಿಸ ಬೇಕು.

ಸರಕಾರದ ಸವಲತ್ತುಗಳನ್ನು ಅರ್ಹ ಫಲಾನುಭ ವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸ ಬೇಕು.ಸಣ್ಣ ಪುಟ್ಟ ರೆವಿನ್ಯೂ ಸಮಸ್ಯೆಗಳಿಗೆ ಜನರು ಸಿಎಂ ಬಳಿಗೆ ಬರುತ್ತಾರೆ ಎಂದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿ ಸಿದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.