ಬೆಂಗಳೂರು –
ಕೋವಿಡ್‌ನಿಂದಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಶಾಲೆಗಳಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದಾರೆ.ಇದರಿಂದಾಗಿ 2022-23 ನೇ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ಆರಂಭವಾಗುತ್ತಿದೆ.ಇನ್ನೂಅದರಂತೆ ಮೇ 16ರ ಸೋಮವಾರ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭವಾಗಲಿದ್ದು ಮಕ್ಕಳನ್ನು ಬಹಳ ಸಂತೋಷದಿಂದ ಬರಮಾಡಿಕೊಳ್ಳಲು ಸರ್ಕಾರಿ ಶಾಲೆಗಳಲ್ಲಿ ಸಿಹಿ ಖಾದ್ಯ ವನ್ನು ನೀಡಲು ಶಿಕ್ಷಣ ಇಲಾಖೆ ಸೂಚಿಸಿದೆ.ಮಕ್ಕಳು ಶಾಲೆಗೆ ಬರುವುದು ಸಂಭ್ರಮದ ಕ್ಷಣ.ಮೊದಲ ಸಲವಂತು ಶಾಲೆಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲೆ ದೇವಸ್ಥಾನ ವಿದ್ಯಾಮಂದಿರಕ್ಕೆ ಕಾಲಿಡುವಾಗ ಸುಂದರವಾದ ಪರಿಸರ ನಿರ್ಮಾಣವಾಗಬೇಕು.ಮಕ್ಕಳು ಶಾಲೆಗೆ ಬರುವಾಗ ಸಂತೋಷದಿಂದ ಬರಬೇಕು.ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಿಹಿಯನ್ನು ಹಂಚಬೇಕು ಎಂದು ಅಗತ್ಯ ವ್ಯವಸ್ಥೆ ಮಾಡಲಾಗಿದೆ.ಸಿಹಿ ಖಾದ್ಯಗಳನ್ನು ಮಾಡಿ ಮಕ್ಕಳಿಗೆ ವಿತರಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಸ್ಥಳೀಯ ಜನಪ್ರತಿನಿಧಿಗಳು ಶಾಲೆಗೆ ಶ್ರಮದಾನ ಮೂಲಕ ಸರ್ಕಾರಿ ಶಾಲೆಯ ಅಭಿವೃದ್ದಿಯ ಜೊತೆ ಮಕ್ಕಳನ್ನು ಶಾಲೆಗೆ ಖುಷಿಯಂದ ಬರುವಂತೆ ನೋಡಿಕೊಳ್ಳುವ ಸಲುವಾಗಿ ಇಲಾಖೆ ಸಿಹಿ ವಿತರಣೆಯನ್ನು ಮಾಡುತ್ತಿದೆ.ಕಲಿಕಾ ಚೇತರಿಕೆಯ ಚೇತರಿಕೆಯ ವರ್ಷ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವುದಲ್ಲದೇ ಇಡೀ ವರ್ಷವನ್ನು ಕಲಿಕಾ ಚೇತರಿಕ ವರ್ಷವನ್ನಾಗಿ ಇಲಾಖೆ ಘೋಷಣೆಯನ್ನು ಮಾಡಿದೆ.ಕಲಿಕಾ ಚೇತರಿಕೆಯ ಕಾರ್ಯ ಕ್ರಮದಲ್ಲಿ ಏನನ್ನು ಮಾಡಬೇಕು ಎಂಬ ಯೋಜನೆಯನ್ನು ಶಿಕ್ಷಣ ಇಲಾಖೆ ಹಾಕಿಕೊಂಡಿದೆ.ರಾಷ್ಟೀಯ ಶಿಕ್ಷಣ ನೀತಿ 2020- ಆಶಯದಂತೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನವನ್ನು ಬೆಳೆಸುವುದು.2022-23ರ ಶೈಕ್ಷಣಿಕ ವರ್ಷ ವನ್ನು ಕಲಿಕಾ ಚೇತರಿಕೆ ವರ್ಷ ಘೋಷಿಸುವುದು.ರಾಜ್ಯಾ ದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ನಿಶ್ಚಿತಗೊಳಿಸು ವುದು.ಎಲ್ಲಾ ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳ ಬೆಂಬಲವಾಗಿ ಕಲಿಕಾ ಪ್ರಕ್ರಿಯೆಗೆ ಪೂರಕವಾಗಿ ವಿದ್ಯಾರ್ಥಿ ಗಳನ್ನು ತೊಡಗಿಸಿಕೊಳ್ಳುವುದು.ಎಲ್ಲಾ ವಿದ್ಯಾರ್ಥಿಗಳ ಬುನಾದಿ ಶಿಕ್ಷಣ, ಸಂಖ್ಯಾಜ್ಞಾನ,ಎರಡು ವರ್ಷಗಳ ಕಲಿ ಯಬೇಕಿದ್ದ ಕಲಿಕಾ ಕೌಶಲ್ಯ ಮತ್ತು ಈ ಶೈಕ್ಷಣಿಕ ವರ್ಷ ಹೆಚ್ಚಾಗಬೇಕಾಗಿರುವ ಕೌಶಲ್ಯದ ಬಗ್ಗೆ ಗಮನಹರಿಸು ವುದು.ಒಟ್ಟಾರೆ 2023-24 ನೇ ಶೈಕ್ಷಣಿಕ ವರ್ಷ ಪ್ರಾರಂಭದ ವೇಳೆಗೆ ಪ್ರತಿ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆ ಯನ್ನು ಯಾವುದೇ ಅಡೆತಡೆ ಇಲ್ಲದೇ ಸಾಧಿಸಲು ಸಾಧ್ಯ ವಾಗುವಂತೆ ಕ್ರಮ ಕೈಗೊಳ್ಳುವುದು.ಶಾಲೆಯ ಹಬ್ಬದ ವಾತಾವರಣ ಶಾಲೆಗಳಿಗೆ ಮಕ್ಕಳು ಬರಬೇಕಾದ ಸಂದರ್ಭ ದಲ್ಲಿ ಹಬ್ಬದ ಕಳೆ ಮೂಡಬೇಕು.ಮಕ್ಕಳ ಮನಸ್ಸು ಉಲ್ಲಾ ಸಿತರಾಗಿ ಬರಬೇಕು ಎಂಬುದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ರ ಕನಸಾಗಿದ್ದು ಹೀಗೆ ಇದನ್ನು ತಪ್ಪದೇ ಶಾಲೆ ಯಲ್ಲಿ ಮಾಡುವಂತೆ ಶಿಕ್ಷಣ ಸಚಿವರು ನಾಡಿನ ಶಿಕ್ಷಕರಿಗೆ ಕರೆ ನೀಡಿದ್ದಾರೆ.