ಬೆಂಗಳೂರು –
ಮಾರ್ಚ್ 26 ರಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ ರಾಜ್ಯದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಗಳು ನಡೆಯಲಿವೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲ ತಾಣ ಗಳಲ್ಲಿ ಹಾಕುತ್ತಿದ್ದಾರೆ.ಈ ಒಂದು ವಿಚಾರವು ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಗಮನಕ್ಕೆ ಬಂದಿದ್ದು ಈವರೆಗೆ ಇನ್ನೂ ಯಾವುದೇ ರೀತಿಯ ಕ್ರೀಡಾಕೂಟಗಳನ್ನು ನಿಗದಿ ಮಾಡಿರುವುದಿಲ್ಲ.
ಇದು ತಪ್ಪು ಸಂದೇಶವಾಗಿದ್ದು ಇಂತಹ ವದಂತಿ ಗಳಿಗೆ ಯಾರೂ ಕೂಡಾ ಕಿಡಿಗೋಡಬೇಡಿ ಇನ್ನೂ ಕೂಡಾ ಯಾವುದೇ ಕ್ರೀಡಾಕೂಟಗಳ ಸಮಯ ನಿಗದಿಯಾಗಿಲ್ಲ ಹೀಗಾಗಿ ಈ ಕುರಿತಂತೆ ಬರುವ ದಿನಗಳಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..