ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ತಡೆಯಲು ಆಂತರಿಕ ಸಮಿತಿ ರಚನೆ ಮಾಡಿದ ರಾಜ್ಯ ಸರ್ಕಾರ – ನೌಕರರ ಹಿತಾಸಕ್ತಿಯಿಂದ ಮಹತ್ವದ ಆದೇಶ…..

Suddi Sante Desk
ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ತಡೆಯಲು ಆಂತರಿಕ ಸಮಿತಿ ರಚನೆ ಮಾಡಿದ ರಾಜ್ಯ ಸರ್ಕಾರ – ನೌಕರರ ಹಿತಾಸಕ್ತಿಯಿಂದ ಮಹತ್ವದ ಆದೇಶ…..

ಬೆಂಗಳೂರು

ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ, ಸಿಬ್ಬಂದಿ ಗಳ ದೂರುಗಳನ್ನು ಪರಿಶೀಲಿಸಲು ಲೈಂಗಿಕ ಕಿರುಕುಳ ತಡೆಗಾಗಿ ಆಂತರಿಕ ದೂರು ಸಮಿತಿ ರಚನೆ ಮಾಡಿ ಸರ್ಕಾರ ಅದೇಶ ಹೊರಡಿಸಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದಂತ ಡಾ.ವಿಶಾಲ್ ಆರ್ ಅಧಿಕೃತ ಜ್ಞಾಪನ ಹೊರಡಿಸಿದ್ದಾರೆ.ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ, ಸಿಬ್ಬಂದಿಗಳಿಗೆ ಸಹೋ ದ್ಯೋಗಿಗಳಿಗೆ ಕಿರುಕುಳ ನೀಡುವುದು, ಅಸಭ್ಯ ವಾಗಿ ವರ್ತನೆ, ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯದಂತ ಘಟನೆಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾದ ದೂರುಗಳನ್ನು ಪರಿಹರಿಸಲು ಆಂತರಿಕ ದೂರು ಸಮಿತಿಯನ್ನು ಇಲಾಖೆಯಲ್ಲಿ ರಚಿಸಿ ಆದೇಶಿಸಲಾಗಿತ್ತು ಎಂದಿದ್ದಾರೆ.

ಇದಷ್ಟೇ ಅಲ್ಲದೇ ಲೈಂಗಿಕ ದೌರ್ಜನ್ಯ ಪ್ರಕರಣ ದಂತ ಸಂದರ್ಭದಲ್ಲಿ ದೂರು ನೀಡಲು ಆಂತರಿಕ ದೂರು ಸಮಿತಿಯ ಜಿಲ್ಲಾ, ತಾಲೂಕು ಹಂತದಲ್ಲಿ ಯೂ ಸಮಿತಿಯನ್ನು ರಚಿಸಲು ನಿರ್ದೇಶಿಲಾಗಿತ್ತು ಎಂದು ಹೇಳಿದ್ದಾರೆ.ಹಾಗೇ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ಮಹಿಳಾ ಅಧಿಕಾರಿ, ಸಿಬ್ಬಂದಿ ಗಳ ಲೈಂಗಿಕ ಕಿರುಕುಳ ಸಂಬಂಧದ ಆಂತರಿಕ ದೂರು ಸಮಿತಿಯ ಅಧ್ಯಕ್ಷರನ್ನಾಗಿ ಕೆಎಎಸ್ ಅಧಿಕಾರಿ ಡಾ.ರೂಪಶ್ರೀ ನೇಮಕ ಮಾಡಲಾಗಿದೆ.

ಇನ್ನೂ ಸದಸ್ಯರನ್ನಾಗಿ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದಂತ ಅಲ್ಮಾಸ್ ಪರ್ವಿನ್ ತಾಜ್, ಪ್ರಭಾ ಅಲೆಕ್ಸಾಂ ಡರ್, ಶೈಲ, ಶಾಂತಲಾ ಹಾಗೂ ಅಧೀಕ್ಷಕರಾದಂತ ವೆಂಕಟರತ್ನ ಅವರನ್ನು ನೇಮಿಸಿದೆ.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.