ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ 7ನೇ ವೇತನ ಆಯೋಗವು ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ.ಇನ್ನೂ ಇತ್ತ ಸರ್ಕಾರಿ ನೌಕರರ ಬೇಕು ಬೇಡಿಕೆಗಳ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತ್ರತ್ವದಲ್ಲಿ ಸಮಗ್ರವಾಗಿ ವರದಿಯನ್ನು ಸಿದ್ದ ಮಾಡಿ 7ನೇ ವೇತನ ಆಯೋಗಕ್ಕೆ ನೀಡಲಾಗಿದೆ.
ಇನ್ನೂ ಬೆಲೆ ಏರಿಕೆಯ ಪರಸ್ಥಿತಿಯಲ್ಲಿ ಸಧ್ಯ ರಾಜ್ಯದಲ್ಲಿ ಸರ್ಕಾರಿ ನೌಕರರ ಒಂದು ಕುಟುಂಬಕ್ಕೆ ಮಾಸಿಕವಾಗಿ ಎಷ್ಟು ಖರ್ಚು ಆಗುತ್ತದೆ ಎಷ್ಟು ಬೇಕಾಗುತ್ತದೆ ಎಂಬ ಕುರಿತಂತೆ ಸಂಪೂರ್ಣವಾಗಿ ರಾಜ್ಯ ಸರ್ಕಾರಿ ನೌಕರರ ಸಂಘಟನೆಯವರು ಅಂಕಿ ಸಂಖ್ಯೆಯೊಂದಿಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದಾರೆ
ಪ್ರತಿದಿನ ಪ್ರತಿ ತಿಂಗಳು ಹೀಗೆ ಏನೇನು ಎಷ್ಟೇಷ್ಟು ವಸ್ತುಗಳು ಬೇಕಾಗುತ್ತವೆ ಎಂಬ ಕುರಿತಂತೆ ಸಂಪೂರ್ಣವಾಗಿ ಅಂಕಿ ಸಂಖ್ಯೆಯೊಂದಿಗೆ ಲೆಕ್ಕವನ್ನು ನೀಡಿದ್ದಾರೆ.ಈ ಒಂದು ಚಿತ್ರಣವನ್ನು 7ನೇ ವೇತನ ಆಯೋಗಕ್ಕೆ ರಾಜ್ಯದ ಸರ್ಕಾರಿ ನೌಕರರ ಸಂಘಟನೆಯವರು ನೀಡಿದ್ದಾರೆ.
ಇದನ್ನಾ ದರೂ ನೋಡಿಕೊಂಡು ವೇತನ ಆಯೋಗವು ತಮ್ಮ ವರದಿಯಲ್ಲಿ ಉಲ್ಲೇಖವನ್ನು ಮಾಡಲಿ ಎಂಬ ಉದ್ದೇಶದಿಂದ ಈ ಒಂದು ಚಿತ್ರಣವನ್ನು ಅಂಕಿ ಸಂಖ್ಯೆಯೊಂದಿಗೆ ರಾಜ್ಯಾ ಧ್ಯಕ್ಷರು ಉಲ್ಲೇಖವನ್ನು ಮಾಡಿ ನೀಡಿದ್ದಾರೆ.
ಪ್ರತಿನಿತ್ಯ ಕುಟುಂಬದ ಸದಸ್ಯರಿಗೆ ಬೇಕಾಗುವ ಆಹಾರ ವಸ್ತುಗಳಿಂದ ಹಿಡಿದು ಪ್ರತಿಯೊಂದು ವಸ್ತುಗಳ ದರ ಮತ್ತು ಪ್ರಮಾಣ ಹಾಗೆ ಇತರೆ ವಸ್ತುಗಳ ಕುರಿತು ಸಂಪೂರ್ಣವಾಗಿ ವೆಚ್ಚದ ಲೆಕ್ಕಾಚಾರ ವನ್ನು ರಾಜ್ಯಾಧ್ಯಕ್ಷರು ಆಯೋಗಕ್ಕೆ ವಿವರಣೆ ಯೊಂದಿಗೆ ನೀಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..