ಬೆಂಗಳೂರು –
ಕೇಂದ್ರ ಸರ್ಕಾರಿ ನೌಕರರ ಸರಿ ಸಮಾನವಾದ ವೇತನ ಶ್ರೇಣಿ,ಭತ್ಯೆ ಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದರೆ ವಾರ್ಷಿಕವಾಗಿ ₹10,656 ಕೋಟಿ ಹೆಚ್ಚುವರಿಯಾಗಿ ಬೇಕಾ ಗುತ್ತದೆ.ಹೌದು ಸಧ್ಯ ಈಗ ಖಾಲಿ ಇರುವ 2.58 ಲಕ್ಷ ಹುದ್ದೆ ಗಳಿಂದಾಗಿ ಸರ್ಕಾರಕ್ಕೆ ವರ್ಷಕ್ಕೆ ಸುಮಾರು ₹8,531 ಕೋಟಿ ಉಳಿತಾಯವಾಗುತ್ತಿದೆ.ಆದ್ದರಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ ₹2,125 ಕೋಟಿ ಬೇಕಾಗುತ್ತದೆ. ಇದನ್ನಾ ಧರಿಸಿ ಪರಿಷ್ಕರಣೆ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು ಇದರ ಆಧಾರದ ಮೇಲೆ ಈಗ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಮಿತಿ ರಚನೆ ಮಾಡಲು ಮುಂದಾಗಿದ್ದಾರೆ
ಕೇಂದ್ರವು 2016ರಲ್ಲಿ 7ನೇ ವೇತನ ಆಯೋಗದ ಶಿಫಾರ ಸುಗಳನ್ನು ಆಧರಿಸಿ ತನ್ನ ನೌಕರರ ವೇತನ ಭತ್ಯೆಗಳನ್ನು ಪರಿಷ್ಕರಿಸಿತ್ತು.ರಾಜ್ಯದಲ್ಲಿ 2016ರಲ್ಲಿ ವೇತನ ಆಯೋಗ ರಚಿಸದೇ ಒಂದು ವರ್ಷ ತಡವಾಗಿ ಅಂದರೆ 2017ರಲ್ಲಿ 6ನೇ ವೇತನ ಆಯೋಗ ರಚಿಸಿತ್ತು.ಆಯೋಗ ನೀಡಿದ ಶಿಫಾರಸು ಆಧರಿಸಿ 2017ರ ಜುಲೈನಿಂದ ಅನ್ವಯಿಸಿ, 2018ರ ಏಪ್ರಿಲ್ 1 ರಿಂದ ಆರ್ಥಿಕ ಲಾಭ ದೊರೆಯುವಂತೆ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಾಗಿತ್ತು.