ಕಲಿಕಾ ಚೇತರಿಕೆ ಕಾರ್ಯಕ್ರಮ ದ ಉದ್ದೇಶ ಮತ್ತು ಗುರಿಗಳು ಒಂದು ಅವಲೋಕನ…..

Suddi Sante Desk

ಬೆಂಗಳೂರು –

ಕಲಿಕಾ ಚೇತರಿಕೆಯ ಉದ್ದೇಶ ಮತ್ತು ಗುರಿಗಳ ಕುರಿತು ನೊಡೊದಾದರೆ ವಿದ್ಯಾರ್ಥಿಗಳ ಬೇಸಿಕ್ ಶಿಕ್ಷಣ, ಸಂಖ್ಯಾ ಜ್ಞಾನದ ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಉಂಟಾಗಿ ರುವ ಕಲಿಕಾ ನ್ಯೂನ್ಯತೆಯನ್ನು ಸರಿಪಡಿಸಿಕೊಂಡು ಈ ಶೈಕ್ಷಣಿಕ ವರ್ಷಕ್ಕೂ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವುದು ಕಲಿಕಾ ಚೇತರಿಕೆಯ ಮೂಲ ಉದ್ದೇಶ ವಾಗಿದೆ.

ವಿದ್ಯಾರ್ಥಿಗಳಿಗೆ ಬುನಾದಿ ಶಿಕ್ಷಣದ ಜೊತೆಗೆ ಸಂಖ್ಯಾ ಜ್ಞಾನ ವನ್ನು ವೃದ್ದಿಸಿ ಕಲಿಕೆಗೆ ಬೇಕಾಗಿರುವ ಕಲಿಕಾ ಸಾಮಗ್ರಿಗ ಳನ್ನು ತಯಾರಿಸಿಕೊಂಡು ಕಲಿಕಾ ಫಲಗಳು ಈಡೇರು ವಂತೆ ಮಾಡುವುದಾಗಿದೆ.

ರಾಷ್ಟೀಯ ಶಿಕ್ಷಣ ನೀತಿ 2020- ಆಶಯದಂತೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನವನ್ನು ಬೆಳೆಸುವುದು, 2022-23ರ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಘೋಷಿಸುವುದು,ರಾಜ್ಯಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ನಿಶ್ಚಿತಗೊಳಿಸುವುದು,ಎಲ್ಲಾ ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳ ಬೆಂಬಲವಾಗಿ ಕಲಿಕಾ ಪ್ರಕ್ರಿ ಯೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳು ವುದು,ಎಲ್ಲಾ ವಿದ್ಯಾರ್ಥಿಗಳ ಬುನಾದಿ ಶಿಕ್ಷಣ, ಸಂಖ್ಯಾ ಜ್ಞಾನ,ಎರಡು ವರ್ಷಗಳ ಕಲಿಯಬೇಕಿದ್ದ ಕಲಿಕಾ ಕೌಶಲ್ಯ ಮತ್ತು ಈ ಶೈಕ್ಷಣಿಕ ವರ್ಷ ಹೆಚ್ಚಾಗಬೇಕಾಗಿರುವ ಕೌಶಲ್ಯದ ಬಗ್ಗೆ ಗಮನಹರಿಸುವ ಗುರಿ ಹೊಂದಲಾಗಿದೆ.

ಒಟ್ಟಾರೆ 2023-24ನೇ ಶೈಕ್ಷಣಿಕ ವರ್ಷ ಪ್ರಾರಂಭದ ವೇಳೆಗೆ ಪ್ರತಿ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆ ಯನ್ನು ಯಾವುದೇ ಅಡೆತಡೆ ಇಲ್ಲದೇ ಸಾಧ್ಯವಾಗುವಂತೆ ಕ್ರಮ ಕೈಗೊಳ್ಳುವುದು.ಡಿಡಿಪಿಐ ಮತ್ತು ಬಿಇಒಗಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಜವಾಬ್ದಾರಿಯನ್ನು ಡಿಡಿಪಿಐ ಮತ್ತು ಬಿಇಒ ಗಳಿಗೆ ನೀಡಲಾಗಿದೆ.ಶಾಲಾ ಹಂತದಲ್ಲಿ ನಡೆಯಲಿರುವ ಕಲಿಕಾ ಚೇತರಿಕೆಯ ಮಾಹಿತಿಯನ್ನು ಸಿಆರ್ ಪಿಗಳ ಮೂಲಕ ತರಿಸಿಕೊಂಡು ಡಿಡಿಪಿಐ ಮತ್ತು ಬಿಇಒಗಳು ಪರಿಶೀಲಿಸಲಿದ್ದಾರೆ.ಸರ್ಕಾರಿ,ಅನುದಾನಿತ,ಅನುದಾನ ರಹಿತ ಶಾಲೆ ಕಲಿಕಾ ಚೇತರಿಕೆ ಕಾರ್ಯಕ್ರಮ ಸರ್ಕಾರಿ, ಅನುದಾನಿತ,ಅನುದಾನ ರಹಿತ ಶಾಲೆಗಳಿಗೂ ಇದು ಅನ್ವಯಿಸಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.