ಬೆಂಗಳೂರು –
7ನೇ ವೇತನ ಆಯೋಗದ ಟೀಮ್ ನೊಂದಿಗೆ ತುರ್ತು ಸಭೆ ಕರೆದ CM – ಆಯೋಗದ ಅಧ್ಯಕ್ಷರು ಸದಸ್ಯರೊಂದಿಗೆ ವಿಧಾನಸೌಧ ದಲ್ಲಿ ನಡೆಯಲಿದೆ ಸಭೆ
ಬಜೆಟ್ ಅಧಿವೇಶನ ಆರಂಭವಾಗುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಸರ್ವ ಸದಸ್ಯರೊಂದಿಗೆ ಸಭೆಯನ್ನು ಕರೆದಿದ್ದಾರೆ.ಹೌದು ಒಂದು ಕಡೆಗೆ ಬಜೆಟ್ ಅಧಿವೇಶನ ಮತ್ತೊಂದು ಕಡೆಗೆ ಫೆಬ್ರುವರಿ 27 ರಂದು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಇನ್ನೊಂದೆಡೆ ಪ್ರಮುಖವಾಗಿ ಮಾರ್ಚ್ ಗೆ ಆಯೋಗದ ಅವಧಿ ಮುಕ್ತಾಯವಾಗಲಿದೆ
ಹೀಗಾಗಿ ತುರ್ತಾಗಿ ಮುಖ್ಯಮಂತ್ರಿ ಯವರು ಸಭೆಯನ್ನು ಕರೆದಿದ್ದಾರೆ.ಸೋಮವಾರ 3 ಗಂಟೆಗೆ ಬೆಂಗಳೂರಿನ ವಿಧಾನ ಸೌಧ ದಲ್ಲಿರುವ ಮುಖ್ಯಮಂತ್ರಿಯವರ ಕೋಠಡಿಯಲ್ಲಿ ಈ ಒಂದು ಸಭೆ ನಡೆಯಲಿದೆ.ಈಗಾಗಲೇ 7ನೇ ವೇತನ ಆಯೋಗದ ಅವಧಿ ಮುಕ್ತಾಯದ ಬೆನ್ನಲ್ಲೇ ವರದಿ ಕೂಡಾ ಸಂಪೂರ್ಣವಾಗಿ ಸಿದ್ದವಾಗಿದೆ.
ಹೀಗಾಗಿ ಈ ಒಂದು ತುರ್ತು ಸಭೆ ಚರ್ಚೆ ಸಾಕಷ್ಟು ಪ್ರಮಾಣದಲ್ಲಿ ತೀವ್ರ ಕುತೂಹ ಲವನ್ನು ಕೆರಳಿಸಿದ್ದು ನಾಳೆ ಈ ಒಂದು ಸಭೆಯಲ್ಲಿ 7ನೇ ವೇತನ ಆಯೋಗವು ಏನೇನು ಚರ್ಚೆ ಮಾಡಲಿದೆ
ಮುಖ್ಯಮಂತ್ರಿಯವರು ಏನು ಹೇಳಲಿದ್ದಾರೆ ಎಂಬೊದನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಸಿಹಿ ಸುದ್ದಿಯೊಂದಿಗೆ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..