ವಿಜಯನಗರ –
ಮಕ್ಕಳಿಗೆ ಸೇರಬೇಕಾದ ಅಂಗನವಾಡಿ ಆಹಾರ ಧಾನ್ಯ ಗಳನ್ನು ಸಂತೆಯಲ್ಲಿ ಮಾರಾಟ ಮಾಡುವಾಗ ಅಂಗನವಾಡಿ ಶಿಕ್ಷಕಿ ಯೊಬ್ಬರು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ವಿಜಯನಗರ ದಲ್ಲಿ ನಡೆದಿದೆ.ಹೌದು ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಾರಮ್ಮನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ
ಅಂಗನವಾಡಿ ಶಿಕ್ಷಕಿಯಿಂದ ಈ ಒಂದು ಕೃತ್ಯ ಆರೋಪವು ಕೇಳಿ ಬಂದಿದೆ.ಅಂಗನವಾಡಿ ಆಹಾರ ಧಾನ್ಯ ರಾತ್ರೋರಾತ್ರಿ ಸಾಗಿಸುವಾಗ ಗ್ರಾಮಸ್ಥರ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಲು ಸಮೇತ ಶಿಕ್ಷಕಿಯನ್ನ ಹಿಡಿದು ನಂತರ ಅಧಿಕಾರಿಗಳಿಗೆ ಮಾಹಿತಿಯನ್ನು ಮುಟ್ಟಿಸಿದ್ದಾರೆ ಆದರೂ ಕೂಡಾ ಸ್ಥಳಕ್ಕೆ ಯಾವ ಅಧಿಕಾರಿಯೂ ಬರಲೇ ಇಲ್ಲ
ಅಧಿಕಾರಿಗಳ ವರ್ತನೆಯಿಂದ ಸಾರ್ವಜನಿಕರು ಬೇಸರ ಗೊಂಡಿದ್ದು ಹಾಗೇ ಭ್ರಷ್ಟಚಾರದಲ್ಲೂ ಅಧಿಕಾರಿಗಳ ಭಾಗಿಯಾಗಿದ್ದಾರೆನಾ ಎಂಬ ಸಂಶಯವನ್ನು ವ್ಯಕ್ತಪಡಿಸಿ ದ್ದಾರೆ
ಸರ್ಕಾರಿ ಅಧಿಕಾರಿಗಳಿಗೆ ವಾಹನ ಸೌಕರ್ಯವಿದ್ರೂ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯವನ್ನು ತೋರಿದ್ದಾರಂತೆ.ಬಡ ಮಕ್ಕಳ ಆಹಾರ ಕದ್ದು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಅಂಗನವಾಡಿ ಶಿಕ್ಷಕಿಯ ವಿರುಧ್ದ ಸೂಕ್ತ ಕ್ರಮಕ್ಕೆ ಗ್ರಾಮಸ್ಥ ರು ಬಿಗಿ ಪಟ್ಟು ಹಿಡಿದಿದ್ದಾರೆ.