ಚಾಮರಾಜನಗರ –
ಅಂಗನವಾಡಿ ಕಾರ್ಯಕರ್ತೆ ಯೊಬ್ಬರು ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ ಹೌದು ನೌಕರಿಯಿಂದ ತೆಗೆದು ಹಾಕುವುದಾಗಿ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿ ಅಂಗನವಾಡಿ ಕಾರ್ಯ ಕರ್ತೆಯೊಬ್ಬರು ಇರುವೆ ಕೊಲ್ಲುವ ಪೌಡರ್ ಸೇವಿಸಿದ್ದಾರೆ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಜೀರಿಗೆಗದ್ದೆಯಲ್ಲಿ ನಡೆದಿದೆ.ಹನೂರು ತಾಲೂಕಿನ ಮಂಚಾ ಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಮತಾ(52) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಕೆಲಸಕ್ಕೆ ಹಾಜರಾ ದರೂ ಗೈರು ಎನ್ನುವುದು ನೌಕರಿಯಿಂದ ತೆಗೆದು ಹಾಕುತ್ತೇ ನೆಂದು ಸಿಡಿಪಿಒ ನಾಗೇಶ್ ಹಾಗೂ ಸೂಪರ್ ವೈಸರ್ ಪೂರ್ಣಿಮಾ ಕಿರುಕುಳ ಕೊಡುತ್ತಿದ್ದಾರೆಂದು ಮಮತಾ ಆರೋಪಿಸಿದ್ದಾರೆ.

ಸಧ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆ ಗಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾ ಗಿದೆ.