ಅಂಜಲಿ ಅಂಬಿಗೇರ ಯುವತಿಯ ಕೊಲೆ ಪ್ರಕರಣ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ನಿದರ್ಶನ ಶಾಸಕ ಅರವಿಂದ ಬೆಲ್ಲದ – ಅವಳಿ ನಗರದಲ್ಲಿ ಕಾನೂನು ಮೀರಿ ವರ್ತಿಸುವವರ ಕೃತ್ಯಕ್ಕೆ ಕಡಿವಾಣ ಹಾಕಲು ಒತ್ತಾಯಿಸಿದ ಶಾಸಕ ಅರವಿಂದ ಬೆಲ್ಲದ…..

Suddi Sante Desk
ಅಂಜಲಿ ಅಂಬಿಗೇರ ಯುವತಿಯ ಕೊಲೆ ಪ್ರಕರಣ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ನಿದರ್ಶನ ಶಾಸಕ ಅರವಿಂದ ಬೆಲ್ಲದ – ಅವಳಿ ನಗರದಲ್ಲಿ ಕಾನೂನು ಮೀರಿ ವರ್ತಿಸುವವರ ಕೃತ್ಯಕ್ಕೆ ಕಡಿವಾಣ ಹಾಕಲು ಒತ್ತಾಯಿಸಿದ ಶಾಸಕ ಅರವಿಂದ ಬೆಲ್ಲದ…..

ಧಾರವಾಡ

ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಯುವತಿ ಯ ಕೊಲೆ ಪ್ರಕರಣ ಪೊಲೀಸ್ ಇಲಾಖೆಯ ನಿಷ್ಕ್ರಿಯ ತೆಗೆ ನಿದರ್ಶನವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.ಕೆಲ ದಿನಗಗಳ ಹಿಂದಷ್ಟೇ ನಗರದ ನೇಹಾ ಹಿರೇಮಠರ ಭೀಕರ ಹತ್ಯೆ ಪ್ರಕರಣ ನಡೆದಿತ್ತು.

ಇದೀಗ ಅಂಜಲಿ ಅಂಬಿಗೇರ ಕೊಲೆ ನಡೆದಿದೆ.
ಇದರಿಂದ ಹೆಣ್ಣು ಹೆತ್ತವರು ಆತಂಕಪಡುವ ಸ್ಥಿತಿ ನಿರ್ಮಾಣ ಆಗಿದೆ ಎಂದರು.ವಿದ್ಯಾಭ್ಯಾಸ, ಉದ್ಯೋಗ ಗಳಿಗೆ ಹೆಣ್ಣು ಮಕ್ಕಳನ್ನು ಕಳಿಸಲು ಹಿಂಜರಿಯುವಂ ತಾಗಿದೆ.ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆಯುತ್ತಿರುವ ಯುವತಿಯರ ಕೊಲೆ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.

ನಗರದಲ್ಲಿ ಸಮಾಜ ಘಾತುಕ, ಕಾನೂನು ಬಾಹಿರ ‌ಚಟುವಟಿಕೆಗಳಲ್ಲಿ‌ ತೊಡಗಿರುವವರನ್ನು ಪೊಲೀಸರು ನಿಯಂತ್ರಿಸಲು ಆಸಕ್ತಿ ತೋರಿಸುತ್ತಿಲ್ಲ.ಶಾಲಾ-ಕಾಲೇಜು, ಮಹಿಳಾ ಉದ್ಯೋಗಿಗಳ ಸ್ಥಳಗಳಲ್ಲಿ ಪೊಲೀಸರು ಕಾಣಿಸಿಕೊಂಡರೆ ಕೆಲವು ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯ.

ಆದರೆ ಪೊಲೀಸರು ಈ ಕೆಲಸ ಮಾಡುತ್ತಿಲ್ಲ.
ಇನ್ನೊಂದೆಡೆ ಪೊಲೀಸ್ ಠಾಣೆಗಳಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವವರು ಕಾಣಿಸಿಕೊಳ್ಳುತ್ತಿ ರುವುದು ಜನರಲ್ಲಿ ಪೊಲೀಸರ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವಂತಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಕಾನೂನು ಉಲ್ಲಂಘಿಸುವವರಿಗೆ ಯಾವುದೇ ಭೀತಿ ಇಲ್ಲದಂ ತಾಗಿದೆ.

ಆದ್ದರಿಂದ ಅವಳಿ ನಗರದಲ್ಲಿ ಕಾನೂನು ಮೀರಿ ವರ್ತಿಸುವವರ ಕೃತ್ಯಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ.ಪೊಲೀಸ್ ‌ಇಲಾಖೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಸಮಾಜ ಘಾತುಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮುಖಾಂತರ
ಜನತೆ ನಿರ್ಭೀತಿಯಿಂದ ಜೀವಿಸುವ ವಾತಾವರಣವನ್ನು ಸರಕಾರ ಸೃಷ್ಠಿಸಬೇಕೆಂದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

 

*ಶ್ರೀ ಅರವಿಂದ ಬೆಲ್ಲದ.*

ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರು ಹಾಗೂ
*ಶಾಸಕರು*
ಹು-ಧಾ ಪಶ್ಚಿಮ ಕ್ಷೇತ್ರ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.