ಹಾಸನ –
ಹೌದು ಇದಕ್ಕೆ ಸಾಕ್ಷಿ ಆರು ದಶಕಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ನಿರ್ಮಾಣ ಗೊಂಡ ಸರ್ಕಾರಿ ಶಾಲೆ.ಆರು ವರ್ಷಗಳ ಹಿಂದೆ ನಿರ್ಮಿಸಿರುವ ತಾಲ್ಲೂಕಿನ ಕಟ್ಟಾಯ ಹೋಬಳಿಯ ಅಂಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಥಿಲಗೊಂಡಿದ್ದು ಮೂಲ ಸೌಲಭ್ಯ ಇಲ್ಲದೆ ಮಕ್ಕಳು ನೆಲದ ಮೇಲೆಯೇ ಕುಳಿತು ಪಾಠ ಕೇಳಬೇಕಿದೆ.1953ರಲ್ಲಿ ಈ ಶಾಲೆ ಪ್ರಾರಂಭವಾಗಿದೆ.1ರಿಂದ 5ನೇ ತರಗತಿವರೆಗೆ 15 ಮಕ್ಕಳು ಕಲಿಯುತ್ತಿದ್ದು ಇಬ್ಬರು ಶಿಕ್ಷಕರಿದ್ದಾರೆ.ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ.ಶಾಲೆ ಆರಂಭವಾದಾಗ ಒಂದೇ ಕೊಠಡಿಯ ಕಟ್ಟಡ ಇತ್ತು.ಕೆಲ ವರ್ಷಗಳ ಹಿಂದೆ ಮತ್ತೊಂದು ಕೊಠಡಿ ನಿರ್ಮಿಸಲಾಗಿದೆ.
ಹಳೇ ಕೊಠಡಿ ಗೋಡೆಗಳು ಶಿಥಿಲಗೊಂಡಿದ್ದು, ಬಣ್ಣ ಮಾಸಿದೆ.ಮಳೆ ಬಂದರೆ ನೀರು ಸೋರುತ್ತದೆ.ಆಗ,ಒದ್ದೆ ನೆಲದಲ್ಲೇ ಮಕ್ಕಳು ಪಾಠ ಕೇಳಬೇಕಾಗುತ್ತದೆ. ಡೆಸ್ಕ್, ಬೆಂಚು ಇಲ್ಲದ ಕಾರಣ ಮಕ್ಕಳು ನೆಲದಲ್ಲೇ ಕುಳಿತು ಪಾಠ ಕೇಳುತ್ತಿದ್ದಾರೆ.ಈ ಶಾಲೆ ಬಿಟ್ಟರೆ ಮಕ್ಕಳು 20 ಕಿ.ಮೀ ದೂರವಿರುವ ಹಾಸನ ಅಥವಾ ಗೊರೂರಿಗೆ ಹೋಗ ಬೇಕಿದೆ.ಜೋರು ಗಾಳಿ, ಮಳೆ ಸಂದರ್ಭದಲ್ಲಿ ತೊಂದರೆ ತಪ್ಪಿದಲ್ಲ.ಎರಡು ಕೊಠಡಿಯಲ್ಲಿ ತರಗತಿಗಳು ನಡೆಯು ತ್ತವೆ.ಆದರೆ ಅಡುಗೆಗೆ ಪ್ರತ್ಯೇಕ ಕೊಠಡಿ ಇಲ್ಲ.ಆರಂಭದಲ್ಲಿ ತರಗತಿ ನಡೆಯುವ ಕೊಠಡಿಯಲ್ಲೇ ಅಡುಗೆ ಮಾಡಲಾಗು ತ್ತಿತ್ತು.ಗ್ಯಾಸ್ ಇಟ್ಟು ಅಡುಗೆ ಮಾಡುವುದು ಸುರಕ್ಷಿತವಲ್ಲ ಎಂದು ಗ್ರಾಮಸ್ಥರೇ ಸದ್ಯಕ್ಕೆ ಅಡುಗೆ ಮಾಡಲು ಸಮುದಾ ಯ ಭವನ ಬಿಟ್ಟುಕೊಟ್ಟಿದ್ದಾರೆ.ಮಕ್ಕಳು,ಶಿಕ್ಷಕರು ಒಂದೇ ಶೌಚಾಲಯ ವನ್ನು ಬಳಸುತ್ತಾರೆ. ಹೆಣ್ಣು ಮಕ್ಕಳು, ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲ.ಇದರಿಂದ ಹುಡು ಗರು ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುವ ಸ್ಥಿತಿ ಇದೆ. ಜಿಲ್ಲಾ ಪಂಚಾಯಿತಿ ಹೆಚ್ಚುವರಿ ಅನುದಾನದಲ್ಲಿ ಶಾಲೆಗೆ ಪೀಠೋಪಕರಣ ವ್ಯವಸ್ಥೆ ಮಾಡಲು ಪ್ರಸ್ತಾವ ಸಲ್ಲಿಸಲಾಗು ವುದು.ಹಾಗೆಯೇ ಅಕ್ಕಪಕ್ಕದ ಶಾಲೆಗಳಲ್ಲಿ ಹೆಚ್ಚುವರಿ ಪೀಠೋಪಕರಣಗಳಿದ್ದು ಅಂಕನಹಳ್ಳಿ ಶಾಲೆಗೆ ಸ್ಥಳಾಂತರಿ ಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ್ ತಿಳಿಸಿದ್ದಾರೆ.
‘