ರಾಜೀನಾಮೆಯ ಹಿಂದಿನ ಸತ್ಯವನ್ನು ಬಾಯ್ಬಿಟ್ಟ ಸಿಂಗಂ – ಡಿಐಜಿ ಆಗಿ, ಐಜಿ ಆಗಿ ಎಸಿ ರೂಮಲ್ಲಿ ಕೂತ್ಕೊಂಡು ಕೆಲಸ ಮಾಡಲು ಆಸಕ್ತಿಯಿರಲಿಲ್ಲವೆಂದ ಅಣ್ಣಾ ಮಲೈ

Suddi Sante Desk

ಚಿಕ್ಕಮಗಳೂರು –

ಕೊನೆಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ತಮ್ಮ ರಾಜೀನಾಮೆಯ ಹಿಂದಿನ ಸತ್ಯವನ್ನು ಬಾಯ್ಬಿಟ್ಟಿದ್ದಾರೆ ಸಿಂಗಂ.

ಡಿಐಜಿ ಆಗಿ, ಐಜಿ ಆಗಿ ಎಸಿ ರೂಮಲ್ಲಿ ಕೂತ್ಕೊಂಡು ಕೆಲಸ ಮಾಡಲು ಆಸಕ್ತಿಯಿರಲಿಲ್ಲವೆಂದು ಅಣ್ಣಾ ಮಲೈ ಹೇಳಿದ್ದಾರೆ. ಸಿದ್ಧಾರ್ಥ್ ಅಣ್ಣ ಹೇಳಿದ್ದಕ್ಕೆ ರಾಜಿನಾಮೆ ನೀಡಿದ್ದೆನೆ ಎಂದಿದ್ದಾರೆ.

ಡಿಐಜಿ ಆಗಿ, ಐಜಿ ಆಗಿ ಎಸಿ ರೂಮಲ್ಲಿ ಕೂತ್ಕೊಂಡು ಕೆಲಸ ಮಾಡಲು ಆಸಕ್ತಿಯಿರಲಿಲ್ಲ ಸಾಧಾರಣ ವ್ಯಕ್ತಿಗಳ ಬದುಕಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದ್ದೆ ಕೆಲಸಕ್ಕೆ ರಾಜೀನಾಮೆ ಕೊಡುವುದಾ..? ಬೇಡ್ವಾ‌ಅನ್ನೋ ಗೊಂದಲದಲ್ಲಿದ್ದೆ
ಈ ವೇಳೆ ಸಿದ್ದಾರ್ಥ್ ಅಣ್ಣ ನನಗೆ ರಾಜೀನಾಮೆ ಕೊಡಲು ಸಲಹೆ ನೀಡಿದ್ದು ಧೈರ್ಯವಾಗಿ ರಿಸೈನ್ ಮಾಡಿ ನಾನಿದ್ದೇನೆ ಎಂದರು ಹೀಗಾಗಿ ನಾನು ರಾಜಿನಾಮೆ ನೀಡಿದ್ದೆನೆ ಎಂದಿದ್ದಾರೆ.

ರಿಸೈನ್ ಮಾಡುವ ಡೇಟನ್ನು ಕೂಡಾ ಇಬ್ಬರು ಕುತ್ಕೊಂಡು ಡಿಸೈಡ್ ಮಾಡಿದ ಮೇಲೆ ರಾಜೀನಾಮೆ ನೀಡಿದ್ಮೇಲೆ ಜನ ನಿಮ್ಮನ್ನು ಮೂರ್ಖರು ಅನ್ನಬಹುದು ಆದ್ರೆ ನಿಮ್ಮ ಉದ್ದೇಶ ನನಗೆ ಗೊತ್ತಿದೆ ಮುಂದುವರೆಯಿರಿ ಅಂದಿದ್ರು

ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ತಮ್ಮ ಹುದ್ದೆಗೆ ನೀಡಿದ ರಾಜಿನಾಮೆಯ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.