ಹುಬ್ಬಳ್ಳಿ –
ಕೊಲೆಯಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಪುತ್ರಿ ನೇಹಾ ಅವರ ಕುಟುಂಬಕ್ಕೆ ಬಿಜೆಪಿ ಯ ಶಾಸಕರು ಭೇಟಿ ಮಾಡಿ ಸಾಂತ್ವನ ಹೇಳಿದರು ಹೌದು ಕಾಂಗ್ರೆಸ್ ಕಾರ್ಪೋರೇಟರ್ ನಿರಂಜ ನಯ್ಯ ಅವರ ಪುತ್ರಿ ನೇಹಾಳನ್ನು ಫಯಾಜ್ ಕೊಲೆ ಮಾಡಿದ್ದು ಈ ಒಂದು ವಿಚಾರ ಕುರಿತು ವಿದ್ಯಾರ್ಥಿನಿಯ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಹಿರಿಯ ನಾಯಕ, ಬಸನಗೌಡ ಪಾಟೀಲ್ ಯತ್ನಾಳ್, ಮಹೇಶ್ ತೆಂಗಿನಕಾಯಿ, ಅಣ್ಣಪ್ಪ ಗೋಕಾಕ,ಅನುಪ ಬೀಜವಾಡ ನೇತೃತ್ವದಲ್ಲಿ ನ ನಿಯೋಗ ಹುಬ್ಬಳ್ಳಿಯ ನೇಹಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.ನೇಹಾ ತಂದೆ ತಾಯಿಗೆ ಸಾಂತ್ವನ ಹೇಳಿದರು
ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದ ಯತ್ನಾಳ್, ಸಿದ್ದರಾಮಯ್ಯನವರಿಗೆ ಮಾನವೀ ಯತೆ ಇದ್ದರೇ ಅವರ ಹೇಳಿಕೆಯನ್ನು ವಾಪಸ್ ಪಡೆದು, ನೇಹಾ ಕುಟುಂಬದ ಕ್ಷಮೆಯಾಚಿಸಲಿ. ಮಗುವನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವುದು ಬಿಟ್ಟು ಓಲೈಕೆ ರಾಜಕಾರಣ ಮಾಡಬೇಡಿ ಎಂದಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪೊಲೀಸ್ ಎನ್ ಕೌಂಟರ್ ನಿಲ್ಲಿಸುವುದಾಗಿ ಹೇಳಿಕೊಂಡಿದೆ. ಆದರೆ, ಹುಬ್ಬಳ್ಳಿಯ ಘಟನೆ ಖಂಡಿಸುತ್ತಿರುವ ಕಾಂಗ್ರೆಸ್ ಸಚಿವರು, ಮುಖಂಡರು ಇಂತಹ ಘಟನೆಗೆ ಕಾರಣ ಆದವರನ್ನು ಎನ್ ಕೌಂಟರ್ ಮಾಡಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ.
ಕಾಂಗ್ರೆಸ್ ನ ಸಚಿವರೇ ಪ್ರಣಾಳಿಕೆ ಓದಿಲ್ಲ ಅಥವಾ ಒಂದು ಕೋಮಿನ ಮತ ಸೆಳೆಯಲು ಪ್ರಣಾಳಿಕೆ ರಚಿಸಲಾಗಿದೆ ಎಂಬುದು ಸ್ಪಷ್ಟ ವಾಗಿದೆ. ಇವರ ಈ ರೀತಿಯಾದ ನಿಲುವುಗಳಿಂ ದಲೇ ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಯತ್ನಾಳ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಈ ಒಂದು ಸಂದರ್ಭದಲ್ಲಿ ಶಾಸಕರೊಂದಿಗೆ ಅಣ್ಣಪ್ಪ ಗೋಕಾಕ, ಅನುಪ ಬೀಜವಾಡ, ಹನುಮಂತಗೌಡ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……