ನವದೆಹಲಿ –
ಕೇಂದ್ರ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್ ಇದೆ.ಹೌದು ನೀವು ಈ ಸುದ್ದಿ ನೋಡಿದ್ರೆ ಖುಷಿ ಆಗೋದಂತೂ ಸತ್ಯವಾಗಿದ್ದು ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬಡ್ತಿಯನ್ನು ನೀಡಲು ಮುಂದಾಗಿದೆ ಇದರ ಜೊತೆಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೌಕರಿಗೆ ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗುತ್ತಿದೆ
ಹೌದು ಕೇಂದ್ರ ನೌಕರರಿಗೆ ಬಡ್ತಿ ನೀಡುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದೆ.ಆದರೆ ಸರ್ಕಾರ ಬಡ್ತಿಗಾಗಿ ಕನಿಷ್ಠ ಅರ್ಹತಾ ಸೇವೆಗಳ ನಿಯಮಗಳನ್ನು ಬದಲಾಯಿಸಿದೆ.ಹಂತ 1 ಮತ್ತು ಹಂತ 2 ಕ್ಕೆ ಬಡ್ತಿ ಪಡೆಯಲು 3 ವರ್ಷಗಳ ಸೇವೆ ಮಾಡಿರ ಬೇಕು.6 ರಿಂದ 11 ನೇ ಹಂತಕ್ಕೆ ಬಡ್ತಿ ಪಡೆಯಲು 12 ವರ್ಷಗಳ ಅನುಭವದ ಅವಶ್ಯಕತೆ ಇದೆ.
ಹಂತ 7 ಮತ್ತು ಹಂತ 8 ಕ್ಕೆ 2 ವರ್ಷಗಳ ಅನುಭವವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ.ಇದರ ಜೊತೆಗೆ ಡಿಎ ಹೆಚ್ಚಳಕ್ಕೂ ಸರ್ಕಾರ ತೀರ್ಮಾನ ಮಾಡಿದೆಯಂತೆ.
ಇನ್ನು ದಸರಾ ಹಬ್ಬಕ್ಕೆ ತುಟ್ಟಿಭತ್ಯೆ ಸಿಗಬಹುದು ಎಂದು ಹೇಳಲಾಗುತ್ತಿದೆ.28 ರಂದು ಸಚಿವ ಸಂಪುಟ ಸಭೆ ಇದೆ ಅದರಲ್ಲಿ ಪ್ರಕಟಣೆ ಆಗಲಿದೆ ಈ ನಿರ್ಧಾರಕ್ಕೂ ಮುನ್ನವೇ ಸುಗ್ರೀವಾಜ್ಞೆ ಮೂಲಕ ತಿಳಿಸಲಾಗಿದೆ.